ಬ್ಯಾಂಕಿನ ಸೌಲಭ್ಯ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ

ಸೈದಾಪುರ:ಮಾ.2:ಬ್ಯಾಂಕಿನಲ್ಲಿ ರೈತರು, ವಿದ್ಯಾರ್ಥಿಗಳಿಗೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಎಸ್‍ಬಿಐ ಜಿಲ್ಲಾ ಆರ್ಥಿಕ ಸಾಕ್ಷರತಾ ಸಪ್ತಾಹ ಸಲಹೆಗಾರ ಸಂಗಪ್ಪವಾಲಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಎಸ್‍ಬಿಐ ಬ್ಯಾಂಕ ವತಿಯಿಂದ ಹಮ್ಮಿಕೊಂಡ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದರ ಮುಖ್ಯ ವಿಷಯ ‘”ಸರಿಯಾಗಿ ಪ್ರಾರಂಭಿಸಿ, ಫೈನಾನ್ಸಿಯಲ್ ಸ್ಮಾರ್ಟ್ ಆಗಿರಿ” ಎಂಬುದಾಗಿರುತ್ತದೆ. ಪ್ರತಿಯೊಬ್ಬರು ಬ್ಯಾಂಕ ಖಾತೆ ತೆಗದು ವಿವಿಧ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕಖಾತೆ ನಿರಂತರ ಚಾಲ್ತಿಯಲ್ಲಿರಬೇಕು. ಯಾವುದೆ ವ್ಯವಹಾರ ಬ್ಯಾಂಕಿನ ಮೂಲಕ ಮಾಡಿದ್ದೆಯಾದರೆ ವಂಚನೆ ಮೋಸ ಹೊಗದಂತೆ ವಿಶ್ವಾಸದೊಂದಿಗೆ ಕೆಲಸ ಕಾರ್ಯಗಳನ್ನು ಮಾಡಬಹುದು. ಯಾವುದೇ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಸಂಬಂದಿಸಿದ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ನಿಮ್ಮ ಖಾತೆಗೆ ಸಂಬಂದಿಸಿದಂತೆ ಕೆಲ ಮಾಹಿತಿಗಳನ್ನು ಯಾರದರೂ ಕೇಳಿದರೆ ನೀಡದೆ ಎಚ್ಚರಿಕೆಯೊಂದಿಗೆ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಉಪನ್ಯಾಸಕ ಆನಂದ ಪಾಟೀಲ ಕೊಂಡಾಪುರ, ಆರ್ಥಿಕ ಸಾಕ್ಷರತಾ ಸಪ್ತಾಹ ಸಲಹೆಗಾರ ಶ್ರೀಧರ ಸೇರಿದಂತೆ ಇತರರಿದ್ದರು.