ಬ್ಯಾಂಕಿನ ಸಾಲದ ನೋಟಿಸ್‍ಗೆ ಹೆದರಿಬಾವಿಗೆ ಬಿದ್ದು ರೈತ ಆತ್ಮಹತ್ಯೆ…!

ಅಫಜಲಪುರ: ನ.14:ತಾಲೂಕಿನ ಗೌರ (ಬಿ ) ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಅಳ್ಳಗಿ ( ಕೆ) ಗ್ರಾಮದ ರೈತ ಜಗದೀಶ ಹೊಸಮನಿ (38) ಸಾಲದ ಬಾದೆ ತಾಳದೆ ಬ್ಯಾಂಕಿನ ನೋಟಿಸ್ ನೀಡಿದ ಹಿನ್ನಲೆ ಬ್ಯಾಂಕಿನ ನೋಟಿಸ್ ಗೆ ಹೆದರಿ ರವಿವಾರ
ಮಧ್ಯಾಹ್ನ ತನಗೆ ಸೇರಿದ 3 ಎಕರೆ ಜಮೀನಿನಲ್ಲಿರುವ ಬಾವಿಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ.

ಈ ಬಡಪಾಯಿ ರೈತ ಜಗದೀಶ ಹೊಸಮನಿ ಖಾಸಗಿಯಾಗಿ 1 ಲಕ್ಷ ಹಾಗೂ
ಬ್ಯಾಂಕಿನಿಂದ 2 ಲಕ್ಷ ಸಾಲ ಮಾಡಿದ್ದಕ್ಕೆ ಆತನಿಗೆ
ಬ್ಯಾಂಕಿನ 2 ಲಕ್ಷ ಸಾಲ ಮರುಪಾವತಿಸಲು ಮೇಲಿಂದ ಮೇಲೆ ಒತ್ತಡ ಹಾಕಿ ಬ್ಯಾಂಕಿನವರು ನೋಟಿಸ್ ನೀಡಿದ್ದಕ್ಕೆ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮೃತ ರೈತನಿಗೆ ಪತ್ನಿ ಸೇರಿದಂತೆ 2 ಹೆಣ್ಣು 1 ಗಂಡು ಮಕ್ಕಳಿದ್ದರು ಎಂದು ತಿಳಿದು ಬಂದಿದೆ.

ಆತ್ಮ ಹತ್ಯೆ ಮಾಡಿಕೊಂಡ ಮೃತ ಜಗದೀಶ ಹೊಸಮನಿ ಅಂಗವಿಕಲನಾಗಿದ್ದು ತನ್ನ ಹೆಸರಿಗೆ ಇರುವ 3 ಎಕರೆ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿದ್ದ ಈಗ ಎರಡ್ಮೂರು ವರ್ಷಗಳ ಹಿಂದೆ ತನ್ನ ಹೊಲದಲ್ಲಿ ಬಾವಿ ಹೊಡೆಯುವ ಸಲುವಾಗಿ ಜಮೀನು ಮೇಲೆ ಎಸ್.ಬಿ.ಐ, ಬ್ಯಾಂಕ ಅಫಜಲಪುರ ಶಾಖೆಯಲ್ಲಿ 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದ ಅಲ್ಲದೆ ಖಾಸಗಿಯಾಗಿ 1 ಲಕ್ಷ ಸಾಲ ಮಾಡಿದ್ದ.ಎರಡ್ಮೂರು ವರ್ಷದಿಂದ ಹೊಲ ಸರಿಯಾಗಿ ಬೆಳೆಯದ ಕಾರಣ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದೇ ಇರುವ ಕಾರಣ ಖಾಸಗಿ ಹಾಗೂ ಬ್ಯಾಂಕಿನ ಸಾಲ ಹೇಗೆ ತಿರಿಸುವದು ಅಂತ ದಿಕ್ಕು ತೋಚದೆ ಚಿಂತೆ ಮಾಡುತ್ತಾ ಆಗಾಗ ಮನಸ್ಸಿಗೆ ಬೇಸರ ಮಾಡಿಕೊಂಡು ಸಾಯುವ ಮಾತನ್ನು ಪತ್ನಿ ಎದರು ಮಾತನಾಡುತ್ತಿದ್ದ , ಆದರೂ ನಾವು ಹೇಗಾದರೂ ಮಾಡಿ ಸಾಲ ತೀರಿಸಿದರಾಯಿತು ಅಂತಾ ಪತ್ನಿ ಧೈರ್ಯ ಹೇಳುತ್ತಿದ್ದಳು ಎಂದು ಪತ್ನಿ ಲಕ್ಷ್ಮಿ ಪೆÇಲೀಸ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

ಅಂತ್ಯಸಂಸ್ಕಾರದ ವೇಳೆ ಮೃತ ರೈತ ಜಗದೀಶ ಮನೆ ಕಳ್ಳತನ :ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಜಗದೀಶ ಹೊಸಮನಿಯ ತಾಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ರಾತ್ರಿ ಅಂತ್ಯಸಂಸ್ಕಾರ ನಡೆಯುತ್ತಿದ್ದರೆ ಇತ್ತ ರೈತ ಜಗದೀಶನ ಮನೆಯಲ್ಲಿ ರಾತ್ರಿ ಕಳ್ಳತನವಾಗಿದೆ. ಮಗಳ ಮದುವೆ ನಿಶ್ಚಯಿಸಿದ ಮೃತ ಜಗದೀಶ ಮಗಳ ಮದುವೆಗೆಂದು ಬಂಗಾರ ಮತ್ತು ನಗದು ಹಣವನ್ನು ತನ್ನ ಮನೆಯಲ್ಲಿ ಪೆಟ್ಟಿಗೆಯಲ್ಲಿ ಕೊಡುಟ್ಟಿದ್ದನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.