ಬ್ಯಾಂಕಿಗೆ ವಂಚನೆ: ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಸಂಜೆವಾಣಿ ನ್ಯೂಸ್
ಮೈಸೂರು: ಫೆ.12:- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ಶಾಖೆಯಲ್ಲಿ ಮೂವರು ಸಿಬ್ಬಂದಿ ಲಕ್ಷಾಂತರ ರೂ. ಹಣ ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಬ್ಬಂದಿಗಳಾದ ರಾಕೇಶ್, ಪ್ರವೀಣ್ ಹಾಗೂ ಭಾಮಿನಿ ಕಂಚಿಗಾರ ಅವರುಗಳ ವಿರುದ್ದ ಪ್ರಧಾನ ವ್ಯವಸ್ಥಾಪಕ ಆರ್.ಡಿ.ಸುಂದರೇಶ್ ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕಿನ 45,48,052 ರೂ ಮೌಲ್ಯದ ನಾಲ್ಕು ಡಿಡಿಗಳನ್ನು ರದ್ದುಪಡಿಸಿ ಬ್ಯಾಂಕ್ ನ ಪಾರ್ಕಿಂಗ್ ಖಾತೆಗೆ ವರ್ಗಾವಣೆ ಮಾಡಿ ನಂತರ ಸದರಿ ಹಣವನ್ನು ಗ್ರಾಹಕರಾದ ಕಾವ್ಯ, ಸಾನಿಯಾರಾವ್ ಹಾಗೂ ಪ್ರಭುದೇವ್ ಎಂಬುವರ ಎಸ್.ಬಿ.ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ನಂತರ ಅವರ ಅನುಮತಿ ಇಲ್ಲದೆ ಮೂವರ ಖಾತೆಯಿಂದ 30-03-2022 ರಂದು ಎಸ್ಬಿಐ ಮ್ಯೂಚುಯಲ್ ಫಂಡ್ ಗೆ ವರ್ಗಾವಣೆ ಮಾಡಿದ್ದಾರೆ.
ತದನಂತರ ಇದೇ ಹಣವನ್ನು 07-04-2022ರಂದು ಮ್ಯೂಚುವಲ್ ಫಂಡ್ ನಿಂದ ಹಿಂಪಡೆದು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಿ ಮತ್ತೆ ಬ್ಯಾಂಕಿನ ಹೆಸರಿಗೆ ನಾಲ್ಕು ಡಿಡಿಗಳನ್ನಾಗಿ ಮಾಡಿ ಜಮಾ ಮಾಡಿದ್ದಾರೆ.
30-03-2022 ರಿಂದ 07-04-2022 ರವರೆಗೆ 45,48,052 ರೂ ಹಣವನ್ನು ತಾತ್ಕಾಲಿಕವಾಗಿ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ವಂಚಿಸಿ, ಗ್ರಾಹಕರ ಅನುಮತಿ ಇಲ್ಲದೆ ಮ್ಯೂಚುಯಲ್ ಫಂಡ್ ಗೆ ಹೂಡಿಕೆ ಮಾಡಿ, ಪ್ರಾದೇಶಿಕ ಕಚೇರಿಗೆ ತಪ್ಪುಮಾಹಿತಿ ನೀಡಿರುವ ಮೂವರು ಸಿಬ್ಬಂದಿ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವಂತೆ ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.