ಬ್ಯಾಂಕಿಂಗ್ ಸೌಲಭ್ಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಬೇಕು: ನಾಯರಿ

ದಾವಣಗೆರೆ.ಜು.೨೧: ಬ್ಯಾಂಕಿAಗ್ ಸೌಲಭ್ಯವು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿಸುವುದಕ್ಕಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕಳೆದೆರಡು ದಶಕಗಳಿಂದ ಹೋರಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.ಬ್ಯಾಂಕ್ ರಾಷ್ಟಿçÃಕರಣದ 53 ನೇ ವಾರ್ಷಿಕೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘವು ದಾವಣಗೆರೆಯ ಹೆಚ್‌ಐವಿ ಸೋಂಕಿತ ಅನಾಥ ಮಕ್ಕಳನ್ನು ಆರೈಕೆ ಮಾಡುತ್ತಿರುವ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ವಿಬಿಎಫ್ ಫೌಂಡೇಶನ್‌ನ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದರು.ದೇಶದ 6.38 ಲಕ್ಷ ಹಳ್ಳಿಗಳ ಪೈಕಿ ಇಂದಿಗೂ ಕೇವಲ 35ಸಾವಿರ ಹಳ್ಳಿಗಳಲ್ಲಿ ಮಾತ್ರ ಬ್ಯಾಂಕಿAಗ್ ಸೌಲಭ್ಯ ಲಭ್ಯವಿದೆ. ಈ ಅಸಮತೋಲನ ನಿವಾರಣೆಯಾಗಬೇಕಾದರೆ ಸರಕಾರವು ರಾಷ್ಟಿçÃಕರಣದ ಬ್ಯಾಂಕಿAಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಹಾಗೂ ವಿಸ್ತಾರಗೊಳಿಸಬೇಕು ಎಂದು ಹೇಳಿದರು.ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಮಾತನಾಡಿ, ಬ್ಯಾಂಕ್ ರಾಷ್ಟಿçÃಕರಣ ದೇಶದ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ. ಆದರೆ ಇತ್ತೀಚೆಗೆ ಸರಕಾರಗಳು ರಾಷ್ಟಿçÃಕೃತ ಬ್ಯಾಂಕಿAಗ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ಬ್ಯಾಂಕಿAಗ್ ನೀತಿಯನ್ನು ಜಾರಿಗೊಳಿಸುತ್ತಿರುವುದು ದೇಶ ವಿರೋಧಿಯಾಗಿದೆ. ದೇಶದ ಜನರು ಸರಕಾರಿ ಬ್ಯಾಂಕುಗಳ ಮೇಲೆ ವಿಶ್ವಾಸವಿಟ್ಟಿದ್ದಾರೆಯೇ ವಿನಹ ಖಾಸಗಿ ಬ್ಯಾಂಕುಗಳ ಮೇಲೆ ಅಲ್ಲ. ಸರಕಾರವು ಪ್ರಸ್ತುತ ಇರುವ ರಾಷ್ಟಿçÃಕೃತ ಬ್ಯಾಂಕುಗಳನ್ನು ಬಲಗೊಳಿಸುವುದರ ಜೊತೆಗೆ ಖಾಸಗಿ ಬ್ಯಾಂಕುಗಳನ್ನೂ ರಾಷ್ಟಿçÃಕರಣಗೊಳಿಸಬೇಕು ಎಂದರು.ವಿಬಿಎಫ್ ಫೌಂಡೇಶನ್‌ನ ಅಧ್ಯಕ್ಷ ಶಿವಕುಮಾರ ಮೇಗಳಮನೆ ಬ್ಯಾಂಕ್ ನೌಕರರ ಸಂಘದ ನೆರವನ್ನು ಸ್ವೀಕರಿಸಿ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘವು ತನ್ನ ಸದಸ್ಯರ ಹಿತರಕ್ಷಣೆಯ ಜೊತೆಗೆ ಈ ರೀತಿಯ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇತರ ಸಂಘ ಸಂಸ್ಥೆಗಳೂ ಇದೇ ರೀತಿ ನಮಗೆ ಸಹಕಾರ ನೀಡಿದಲ್ಲಿ ನಮ್ಮ ವಿಬಿಎಫ್ ಫೌಂಡೇಶನ್ ಇನ್ನಷ್ಟು ಸೇವಾ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಲಿದೆ ಎಂದರು.ಈ ವೇಳೆ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಉಪಾಧ್ಯಕ್ಷ ಆರ್.ಆಂಜನೇಯ, ಪದಾಧಿಕಾರಿಗಳಾದ ಪರಶುರಾಮ್, ಹೆಚ್.ಎಸ್.ತಿಪ್ಪೇಸ್ವಾಮಿ, ಸುರೇಶ್ ಚೌಹಾಣ್, ಕೆ.ಶಶಿಶೇಖರ್, ವಿ.ಆರ್.ಹರೀಶ್, ಅಮೃತಾ, ರಮೇಶ್, ಜ್ಞಾನೇಶ್ವರ ಮಾಕವಾಡೆ, ಎಸ್.ಪ್ರಶಾಂತ್ ಇತರರಿದ್ದರು.

Attachments area