ಬ್ಯಾಂಕಿಂಗ್ ಪರೀಕ್ಷೆ ಕಷ್ಟವೇನಲ್ಲ

ಕಲಬುರಗಿ:ನ.4:ಆಸಕ್ತಿಯಿಂದ ವ್ಯವಸ್ಥಿತವಾಗಿ ಓದಿದರೆ ಯಾವುದೇ ಪದವೀದರರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಪಾಸ್ ಮಾಡಬಹುದು. ಮೊದಲಿನಂತೆ ಬ್ಯಾಂಕಿಂಗ್ ಕ್ಷೇತ್ರ ಕೆಲವರಿಗೆ ಮಾತ್ರ ಸೀಮಿತವಾಗಿಲ್ಲ. ಗಣಿತ ವಿಷಯ ತೆಗೆದುಕೊಂಡ ಯಾರಾದರೂ ಒಂದೊಮ್ಮೆ ಪರೀಕ್ಷೆ ಎದುರಿಸುವ ಪ್ರಯತ್ನ ಮಾಡಬಹುದು ಅದಕ್ಕೆ ಬೇಕಾಗಿರುವುದು ಒಂದಿಷ್ಟು ಆಸಕ್ತಿ ಸರಿಯಾದ ಮಾರ್ಗದರ್ಶನ ಅಷ್ಟೇ ಎಂದು ಇಂದ್ರ ಸ್ಕೂಲ್ ಆಫ್ ಬ್ಯಾಂಕಿಂಗ್ ನಿರ್ದೇಶಕ ದೇವೀಂದ್ರಪ್ಪ ವಿಶ್ವಕರ್ಮ ಹೇಳಿದರು. ಅವರು ಕಲಬುರಗಿ ನಗರದ ಹರಳಯ್ಯ ಭವನದಲ್ಲಿ ಆಯೋಜಿಸಿದ ಒಂದು ವಾರದ ಬ್ಯಾಂಕಿಂಗ್ ತರಬೆತಿ ಸಿಬಿರದಲ್ಲಿ ಮಾತನಾಡಿ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ (ಆರ್‍ಆರ್‍ಬಿ) ಹುದ್ದೆ ಭರ್ತಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಪರೀಕ್ಷೆ ನಡೆಸುತ್ತದೆ. ಬಿ.ಕಾಂ, ಎಂ.ಕಾಂ ಹೀಗೆ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರ ಆಯ್ದುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಆಸಕ್ತಿ ಇರುವ ಬೇರೆ ಪದವಿಧರರೂ ಪರೀಕ್ಷೆ ಎದುರಿಸಿ ಗೆಲ್ಲುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ಆಂದ್ರ ಪ್ರದೇಶ, ತೆಲಂಗಾಣ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಗಿಟ್ಟಿಸುತ್ತಾರೆಂಬ ಟ್ರೆಂಡ್ ಇತ್ತೀಚಿನ ವರ್ಷಗಳಲ್ಲಿ ಬದಲಾಗಿದೆ. ಕರ್ನಾಟಕದವರೂ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‍ಗಳಲ್ಲಿ ನೌಕರಿ ಪಡೆಯುತ್ತಿದ್ದಾರೆ. ಬ್ಯಾಂಕಿಂಗ್ ತರಬೆತಿ ಪಡೆಯಲು ಇಚ್ಚಿಸುವವರು ಮೋಬೈಲ ನಂಬರ್ : 8088625745 ಗೆ ಕರೆಮಾಡಲು ತಿಳಿಸಲಾಗಿದೆ.