ಬ್ಯಾಂಕಾಕ್’ ನಲ್ಲಿ ಹನಿಮೂನ್

ಹಾರರ್, ಕಾಮಿಡಿ ಎಂಟರ್‍ಟೈನರ್ ಜೊತೆಗೆ ಶೃಂಗಾರವೇ ಪ್ರಧಾನವಾಗಿರುವ ಚಿತ್ರ “ಹನಿಮೂನ್ ಇನ್ ಬ್ಯಾಂಕಾಕ್” ಬಿಡುಗಡೆಗೆ ಚಿತ್ರ ಸಿದ್ದತೆ ನಡೆಸಿದೆ. ಹೊಸದಾಗಿ ಮದುವೆಯಾದ ನವದಂಪತಿಗಳು ಹನಿಮೂನ್‍ಗೆ ಬ್ಯಾಂಕಾಕ್‍ಗೆ ಹೋದಾಗ ಅಲ್ಲಿ ನಡೆಯುವ ಕುತೂಹಲಕಾರಿ ಘಟನೆಗಳೇ ಚಿತ್ರದ ಕಥಾವಸ್ತು.

ಹಾರರ್,ಥ್ರಿಲ್ಲರ್ ಕಥೆಯನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿರುವುದು ಚಿತ್ರದ ವಿಶೇಷ.ಬ್ಯಾಂಕಾಕ್ ಹಾಗೂ ಪಟ್ಟಾಯದಲ್ಲೇ ಚಿತ್ರದ ಶೇಕಡಾ 70ರಷ್ಟು ಭಾಗದ ಚಿತ್ರೀಕರಣ ನಡೆಸಲಾಗಿದೆ.ಎಲ್ಲಾ ಅಂದುಕೊಂಡಂತೆ ಆದರೆ ಇದೇ ತಿಂಗಳ 22 ರಂದು ಚಿತ್ರ ತೆರೆಗೆ ಬರಲಿದೆ.

ಚಿತ್ರದಲ್ಲಿ ಉದಯ ಸೂರ್ಯ ಹಾಗೂ ವಿಶಾಲ್ ನಾಯಕರು ಅನುಗೌಡ ಮತ್ತು ಪ್ರೇಕ್ಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಬಿ.ಎಸ್. ಸಂಜಯ್ ನಿರ್ದೇಶಿಸಿರುವ ಚಿತ್ರವನ್ನು ಕೆ. ರಮೇಶ್ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಮುಂಬೈ ಬೆಡಗಿ ಅನನ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದಲ್ಲಿ  ಒಟ್ಟು ಮೂರು ಹಾಡುಗಳಿವೆ. ಎಂ.ಸಂಜು ಸಂಗೀತ, ಗಿರೀಶ್ ಛಾಯಾಗ್ರಹಣ ಚಿತ್ರಕ್ಕಿದೆ.

ನಿರ್ಮಾಪಕ ರಮೇಶ್ ಹಲವು ಚಿತ್ರಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ವಿಜಯ್ ಚೆಂಡೂರ್ ಅಲ್ಲದೆ ಹಿರಿಯ ನಿರ್ದೇಶಕ ವಿಕ್ಟರಿ ವಾಸು ಚಿತ್ರದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.