ಬೌರಿಂಗ್ ಮೆಡಿಕಲ್ ಕಾಲೇಜು ಶೀಘ್ರ ಜನತೆಗೆ ಸಮರ್ಪಣ

Please carry a photo of this NEWLY CONSTRUCTED BOWRING MEDICAL COLLEGE AND RESEARCH INSTITUTE , BANGALORE FOR KANNADA RAJYOTSAVA CELEBERATIONS IN TODAYS PAPER


ಬೆಂಗಳೂರು, ನ. ೧- ನಗರದ ಶಿವಾಜಿ ನಗರದಲ್ಲಿರುವ ಬೌರಿಂಗ್ ಮತ್ತು ಲೇಡಿಕeನ್ ವೈದ್ಯಕೀಯ ಮಹಾವಿದ್ಯಾಲಯದ ಹಾಗೂ ಸಂಶೋಧನಾ ಸಂಸ್ಥೆಯನ್ನು ಶ್ರೀಘದಲ್ಲೇ ಉದ್ಘಾಟಿಸಿ ಜನತೆಗೆ ಸಮರ್ಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಮನೋಜ್ ಕುಮಾರ್ ಅವರು ತಿಳಿಸಿದ್ದಾರೆ.
ನಾಡಿನ ಹಾಗೂ ಬೆಂಗಳೂರು ಉತ್ತರ ವಿಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿರುವ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಸಚಿವರಾದ ಡಾ. ಸುಧಾಕರ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
೧೫೦ ಸೀಟುಗಳ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಹಾಗೂ ರೋಗಿಗಳಿಗೆ ಬೇಕಾದ ಸವಲತ್ತುಗಳಿಂದ ಕೂಡಿದೆ ಎಂದಿರುವ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಆರೈಕೆಗೆ ತೊಡಗಿರುವ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರಾದ ಡಾ. ಸುಧಾಕರ್ ಅವರ ಅವಿರತ ಹೋರಾಟದ ಫಲವಾಗಿ ಇಂದು ಕೋವಿಡ್ ಸೋಂಕು ರೋಗಕ್ಕೆ ಚಿಕಿತ್ಸೆ ಮತ್ತು ಕಡಿವಾಣ ಹಾಕಿದ್ದು ಇದರ ಹಿಂದೆ ಸರ್ಕಾರದ ಶ್ರಮ ಇದೆ ಎಂದು ಹೇಳಿದರು.
ಕೋವಿಡ್ ಹೋರಾಟದಲ್ಲಿ ಈ ಆಸ್ಪತ್ರೆ ಮುಂಚೂಣಿಯಲ್ಲಿ ನಿಂತು ರೋಗಿಗಳ ಆರೈಕೆ ಮಾಡಿದೆ. ತಾಯಿ ಭುವನೇಶ್ವರಿ ಕೃಪೆಯಿಂದ ನಾವೆಲ್ಲರೂ ಸುರಕ್ಷಿತವಾಗಿ ಕೋವಿಡ್ ಮಹಾಮಾರಿಯನ್ನು ತೊಲಗಿಸಿ ಜನರನ್ನು ರಕ್ಷಿಸುವ ಪಣ
ತೊಟ್ಟು ಕನ್ನಡ ರಾಜ್ಯೋತ್ಸವ
ದಲ್ಲಿ ಸರಳವಾಗಿ ಆಚರಿಸಿ ಮುಖಗವಸು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ಕೋರಿದರು.