ಬೌದ್ಧ ಸಾಹಿತ್ಯ ಪರಿಷತ್ತಿನ ಉದ್ಘಾಟನೆ ನಾಳೆ

ಕಲಬುರಗಿ,ಮೇ.21-ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತು ರಾಜ್ಯ ಘಟಕದ ಉದ್ಘಾಟನೆಯನ್ನು ಮೇ. 22 ರಂದು ಬೆಳಗ್ಗಿನ 11 ಗಂಟಗೆ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾ ಮಂಡಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿದ್ದಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ ಸಾನಿಧ್ಯದಲ್ಲಿ ಸಾಹಿತಿ, ಚಿಂತಕ ಡಾ.ಪ್ರಭು ಖಾನಾಪುರೆ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್‍ನ್ನು ಉದ್ಘಾಟಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ, ಹಿರಿಯ ಸಾಹಿತಿ ವಿ.ಆರ್.ಚಾಂಬಾಳ ಮುಖ್ಯಾತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಎಸ್.ಕಾನೇಕರ ವಹಿಸುವರು. ಬೌದ್ದ ಧಮ್ಮದ ಅಭಿಮಾನಿಗಳು, ಬೌದ್ದ ಸಾಹಿತಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಪ್ರಧಾನ ಕಾರ್ಯದರ್ಶ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.