ಬೌದ್ಧ ಜೀವನ ಮಾರ್ಗ ಮೌಲ್ಯಯುಕ್ತವಾದ ಕೃತಿಃ ಕುಲಸಚಿವ ಪರಮೇಶ್ವರ ನಾಯಕ

ಬೀದರ:ಜು.18: ನಗರದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭನವದಲ್ಲಿ ಡಾ|| ಬಾಬಾಸಾಹೇಬ್ ಅಂಬೇಡ್ಕರ ಸಾಂಸ್ಕøತಿಕ ಶೈಕ್ಷಣಿಕ ಸಾಹಿತಿಕಾ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ , ಜೈ ಹಿಂದ ಹಿರಿಯ ನಾಗರಿಕರ ಸಂಘ ಬೀದರ ಇವರ ಸಂಯುಕ್ತಾಶ್ರದಲ್ಲಿ ದೆಹಲಿ ವಿಶ್ವ ವಿದ್ಯಾಲಯದ ಡಾ. ಕೆ ಪಿ ವಾಸನಿಕ ಬರೆದಿರುವ ಬುದ್ದ ಆನ್ ಹ್ಯಾಪಿನೆಸ್ ಆಂಗ್ಲ ಭಾಷೆಯ ಕೃತಿಯನ್ನು ಕನ್ನಡ ಭಾಷೆಗೆ ಬೌದ್ಧ ಜೀವನ ಮಾರ್ಗ ರೂಪದಲ್ಲಿ ಅನುವಾದವನ್ನು ಮಾಡಿರುವ ಶ್ರೀ ನಾರಾಣರಾವ ಕಾಂಬಳೆ ರವರ ಕೃತಿ ಬಿಡುಗಡೆ ಸಮಾರಂಭವನ್ನು ಜರುಗಿತು. ಗು ವಿ ಕ ಗೌರವ ಡಾಕ್ಟರೇಟ ಪದವಿಯನ್ನು ಪದೆದುಕೊಂಡಿರುವ ಡಾ|| ತಾತಾರಾವ ಕಾಂಬಳೆ ಉದ್ಘಾಟನೆಯನ್ನು ಮಾಡಿ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ರವರ ಜೀವನ ಹೋರಾಟ, ಪಸ್ತೂತ ಸಮಾಜದಲ್ಲಿ ನಮ್ಮ ಹಕ್ಕುಗಳು ನಾನು ಪಡೆದುಕೊಳ್ಳಬೇಕ್ಕಾದರೆ ಎಲ್ಲಾ ರಂಗದಲ್ಲಿ ಒಗಟ್ಟು ಅನಿವಾರ್ಯವಾಗಿದೆ. ಬೀದರ ವಿಶ್ವವಿದ್ಯಾಲಯದ ಕುಲಸಚಿವರಾಗ ಪ್ರೊ. ಪರಮೇಶ್ವ ನಾಯಕ ಮಾತನಾಡಿ ದ್ವೇಶ ಅಸೂವೆ ಹಿಂಸೆ ಅಸಮಾನತೆಯನ್ನು ತಡೆಗಟ್ಟಲು ಬುದ್ಧ ಧಮ್ಮದ ಪ್ರಿತಿ ಕರುಣೆ ಸ್ನೇಹ ಅವಶ್ಯಕವಾಗಿದೆ. ಪುಸ್ತಕದಲ್ಲಿ ಸಿದ್ಧಾರ್ಥ ಬುದ್ಧನಾಗಿರುವುದು,ಬುದ್ದನ ಮೊದಲ ಪ್ರವಚನ, ನಾಲ್ಕು ಆರ್ಯ ಸತ್ಯಗಳು,ಪಂಚಶೀ¯ ಆರ್ಯ ಅಷ್ಠಾಂಗಿಕ ಮಾರ್ಗಗಳು,ಹತ್ತು ಪರಿಮೀತ,ಮಾಧ್ಯಮ ಮಾರ್ಗ, ಕಾರಣ ಮತ್ತು ಪರಿಣಾಮ ಅನಿತ್ಯತೆ ಶೂನ್ಯತೆ ಪ್ರತಿತ್ಯ ಸಮುತ್ಫಾದ ಧ್ಯಾನ ವಿಪಶ್ಯನಾ ಬುದ್ದನ ನಂತರ ಚಳುವಳಿ ನಿರ್ವಾಣ ಹದಿನಾಲ್ಕು ಅಧ್ಯಾನದಿಂದ ಕೂಡಿರುವ 336 ಪುಟಗಳ ಕೃತಿ ಮೌಲ್ಯಯುಕ್ತಾಗಿದೆ. ಕೃತಿ ರಚನೆಕಾರರ ಪರಿಚಯವನ್ನು ಬೆಂಗಳೂರು ಶಿಕ್ಷಣ ಇಲಾಖೆ ಅಧಿಕಾರಿ ಡಾ. ಟಿ ಆರ್ ದೊಡ್ಡೆ ಮಾಡಿಕೊಟ್ಟರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರು, ಬೀದರ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ ಗಂದಗೆ, ಸಮಾ ಸಮಾಜ ನಿರ್ಮಾಣಕ್ಕೆ ಬುದ್ದ ಬಸವ ಅಂಬೇಡ್ಕರ ತತ್ವ ಸಿದ್ದಾಂತಗಳು ಮೈಗೂಡಿಸಿಕೊಂಡು ನಡೆಯಬೇಕು. ಭಾಷಣಕ್ಕೆ ಸಿಮಿತವಾಗದೆ ಅನುದಿನ ಆಚರಣೆಯಲ್ಲಿ ತಂದಾಗ ಸಮಾ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ಪ್ರಸ್ತಾವಿಕ ನುಡಿ ನಾರಾಯಣರಾವ ಕಾಂಬಳೆ ಮಾತನಾಡಿ 36 ವರ್ಷ ಸರ್ಕಾರಿ ಸೇವೆ ಪ್ರಮಾಣಿಕವಾಗಿ ಮಾಡಿದ್ದೇನೆ ಸಾಹಿತ್ಯ ಸೇವೆ ಸಂಗೀತ ಸೇವೆ ಮೂಲಕ ಸಮಾಜಕ್ಕೆ ಕೊಡಿಗೆಯನ್ನು ನೀಡುತ್ತಿದ್ದೇನೆ. ಸ್ವಾಗತ ಪ್ರೊ. ರಾಜೇಪ್ಪಾ ಗುನ್ನಳ್ಳಿ ಕಾರ್ಯಕ್ರಮದ ನಿರೂಪಣೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾಡಿದರು, ಕಾರ್ಯಕ್ರಮದಲ್ಲಿ ಜಿ ವಾಹಿನಿ ಮುಂಬೈ ಸಿಲ್ವರ ಮೇಡಲನ್ನು ಪಡೆದುಕೊಂಡ ಕು|| ಶಿವಾನಿ ಸ್ವಾಮಿ, ಜಾನಪದ ಗಾಯಕರಾದ ಶೆಷರಾವ ಬೆಳಕುಣಿ ಹಾಡುಗಳನ್ನು ಹಾಡಿದರು, ಪಂಡಿಚಿದ್ರಿ ಕಾರ್ಯಕ್ರಮ ಕುರಿತು ಮಾತನಾಡಿದರು. ಧಾರವಾಡ ವಿವಿ ಹಿಂದಿ ಪ್ರಧ್ಯಾಪಕರಾಗಿ ಸೇವಾ ನಿವೃತ್ತಿಯನ್ನು ಹೊಂದಿರುವ ಡಾ|| ಸುರೇಶ ಮೂಳೆ ದಂಪತಿಗಳಿಗೆ, ನಾರಾಯಣರಾವ ದಂಪತಿಗಳಿಗೆ, ಗು ವಿ ಕ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಡಾ|| ತಾತರಾವ ಕಾಂಬಳೆ ರವರಿಗೆ ವಿಶೇಷವಾದ ಸನ್ಮಾನವನ್ನು ಮಾಡಲಾಯಿತು, ದಿವ್ಯ ಸಾನಿಧ್ಯ ವರಜ್ಯೋತಿ ಭಂತೆ ವಹಿಸಿದರು. ಬಸವರಾಜ ಬುಕ್ಕ ರಾಜಶೇಖರ ಮಂಗಲಗಿ ಹಣಮಂತ ವಲ್ಲೆಪೂರೆ ಶಂಭುಲಿಂಗ ವಾಲದೊಡ್ಡಿ ಶಂಕರರಾವ ಸಿಂಧೆ, ಹುಲಸೂರು ತಹಸಿಲ್ದಾರ ಶಿವಾನಂದ ಮೇತ್ರೆ, ಶಂಕರಾವ ದೊಡ್ಡಿ ಗೀತಾ ಚಿದ್ರಿ ಪ್ರೇಮಲಾ ಡಾಂಗೆ , ಡಾ. ಪ್ರಥ್ವಿರಾಜ ಲಕ್ಕಿ ಮುಂತಾದವರು ಉಪಸ್ಥಿಯಲ್ಲಿದ್ದರು ವಂದನಾರ್ಪಣೆ ಯುವ ಸಾಹಿತಿ ಶರಣಬಸಪ್ಪಾ ಫುಲೆ ಮಾಡಿದರು.