ಕೋಲಾರ, ಜೂ.೧೮- ಪತ್ಯೇತರ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳ ಬೌದ್ಧಿಕಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಅಂತಹ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ಮಹಿಳಾ ಸಮಾಜ ಆಡಳಿತಾಧಿಕಾರಿ ಎಂ.ನವೀನ ತಿಳಿಸಿದರು.
ನಗರದ ಮಹಿಳಾ ಸಮಾಜ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮೇಧಾ ೨೦೨೩ರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಅವರು ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಧ್ಯಾರ್ಥಿಗಳು ಭಾಗಿಯಾಗಿ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ ಇವತ್ತಿನ ಕಾಲಘಟ್ಟದಲ್ಲಿ ಟಿವಿ, ಮೊಬೈಲ್‌ಗಳಿಗೆ ಅಂಟಿಕೊಳ್ಳದೆ ವಿಜ್ಞಾನದ ವಿಷಯಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಆಧ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಮಾಜ ಕಾಲೇಜು ಅಡಳಿತ ಮಂಡಳಿ ಉಪಾಧ್ಯಕ್ಷೆ ಮಾಲಾ ಸಿ.ಆರ್, ಕಾರ್ಯದರ್ಶಿ ನಂದನ, ಪಿ.ಆರ್.ಒ ಶ್ರೀನಿವಾಸ್, ಮಂಜುನಾಥ್, ಪ್ರಾಂಶುಪಾಲರಾದ ನಾಗಲಕ್ಷ್ಮೀ, ಉಮಾ, ಶ್ರೀನಾಥ್, ಭವ್ಯ, ಲೋಕೇಶ್, ಹೇಮಾ, ರೇಷ್ಮಾ, ರಮ್ಯ, ಶಿವಪ್ಪ, ರಂಗನಾಥ್, ಬೋಧಕ ಸಿಬ್ಬಂದಿ, ವಿಧ್ಯಾರ್ಥಿಗಳು, ಪೋಷಕರು ಇದ್ದರು.