ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ:ಠಾಕೂರ

ಶಹಾಬಾದ:ಜ.21: ಜಗತ್ತಿನಲ್ಲಿ ನಾವೀನ್ಯ ಮತ್ತು ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವ, ಬೌದ್ಧಿಕ ಆಸ್ತಿ ಹಕ್ಕುಗಳ ಪಾತ್ರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ನ್ಯಾಯವಾದಿ ರಘುವೀರಸಿಂಗ ಠಾಕೂರ ಹೇಳಿದರು.

ಅವರು ಶುಕ್ರವಾರ ನಗರದ ಎಸ್.ಎಸ್.ಮರಗೋಳ ಕಾಲೇಜಿನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಬ್ಬ ಲೇಖಕ, ಒಬ್ಬ ಕಥೆಗಾರ, ವಿಜ್ಞಾನಿ ಹೀಗೆ ಇನ್ನೀತರ ಕ್ಷೇತ್ರಗಳಲ್ಲಿ ತಮ್ಮ ಬುದ್ಧಿಶಕ್ತಿಯಿಂದಲೇ ಅಭ್ಯಸಿಸಿ ಹೊರತರುವ ಪುಸ್ತಕ, ಕಥೆ,ಸಂಗೀತ ಇವುಗಳನ್ನು ಬೇರೆ ಯಾರೂ ಕದಿಯದಂತೆ ಈ ಮೊದಲೇ ಅದು ತಮ್ಮದೇ ಶ್ರಮ ಮತ್ತು ತಾವೇ ಹೊರತಂದ ಬೌದ್ಧಿಕ ವಸ್ತುಗಳ ಸಂಬಂಧಿಸಿದ ವಿಚಾರಗಳಿಗೆ ಪಡೆಯುವ ಹಕ್ಕನ್ನು ಬೌದ್ಧಿಕ ಆಸ್ತಿಯ ಹಕ್ಕು ಎಂದಾಗುತ್ತದೆ. ಬೌದ್ಧಿಕ ಆಸ್ತಿಯ ಹಕ್ಕಿನ ಈ ನಯಮದ ತದ್ವಿರುದ್ಧವಾಗಿ ನಡೆದುಕೊಂಡರೆ ಕಾನೂನಿನಲ್ಲಿ ದಂಡ ಹಾಗೂ ಕಾನೂನು ಸೆರೆವಾಸಕ್ಕೆ ಅವಕಾಶವಿದೆ.ಆದ್ದರಿಂದ ಬೌದ್ಧಿಕ ಆಸ್ತಿಯ ಹಕ್ಕಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ನ್ಯಾಯವಾದಿಗಳಾದ ಭಾರತಿ.ಎಮ್.ಪಾಟೀಲ ಮಾತನಾಡಿ, ಬೌದ್ಧಿಕ ಆಸ್ತಿ, ಬಹಳ ವಿಶಾಲವಾಗಿ, ಕೈಗಾರಿಕಾ, ವೈಜ್ಞಾನಿಕ ಮತ್ತು ಕಲಾತ್ಮಕ ಕ್ಷೇತ್ರಗಳಲ್ಲಿನ ಬೌದ್ಧಿಕ ಚಟುವಟಿಕೆಯಿಂದ ಉಂಟಾಗುವ ಕಾನೂನು ಆಸ್ತಿ. ಎರಡು ಪ್ರಮುಖ ಕಾರಣಗಳಿಗಾಗಿ ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ದೇಶಗಳಿಗೆ ಕಾನೂನುಗಳಿವೆ. ಒಂದು, ಸೃಷ್ಟಿಕರ್ತರು ತಮ್ಮ ಸೃಷ್ಟಿಗಳಲ್ಲಿನ ನೈತಿಕ ಮತ್ತು ಆರ್ಥಿಕ ಹಕ್ಕುಗಳಿಗೆ ಮತ್ತು ಆ ಸೃಷ್ಟಿಗಳಿಗೆ ಪ್ರವೇಶದಲ್ಲಿ ಸಾರ್ವಜನಿಕರ ಅಂತಹ ಹಕ್ಕುಗಳಿಗೆ ಶಾಸನಬದ್ಧ ಅಭಿವ್ಯಕ್ತಿ ನೀಡುವುದು. ಎರಡನೆಯದು ಸರ್ಕಾರದ ನೀತಿ, ಸೃಜನಶೀಲತೆ ಮತ್ತು ಅದರ ಫಲಿತಾಂಶಗಳ ಪ್ರಸಾರ ಮತ್ತು ಅನ್ವಯದ ಉದ್ದೇಶಪೂರ್ವಕ ಕ್ರಿಯೆಯಾಗಿ ಉತ್ತೇಜಿಸುವುದು ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುವ ನ್ಯಾಯಯುತ ವ್ಯಾಪಾರವನ್ನು ಉತ್ತೇಜಿಸುವುದು.”ಬೌದ್ಧಿಕ ಆಸ್ತಿಯು ಇದಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಒಳಗೊಂಡಿರುತ್ತದೆ.ಅದನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಬಿಲ್ಲವ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಖ ಜನರಿಗೆ ಕಾನೂನಿ ಅರಿವು ಇಲ್ಲದಿರುವುದರಿಂದಲೇ ಸಮಾಜದಲ್ಲಿ ಅಶಾಂತಿ ಮೂಡುತ್ತದೆ. ವಿದ್ಯಾರ್ಥಿಗಳು ಕಾನೂನನ್ನು ಸರಿಯಾಗಿ ತಿಳಿದುಕೊಂಡರೆ ಸಮಾಜದಲ್ಲಿ ಶಾಂತಿ ಮೂಡಲು ಸಾಧ್ಯ.ಆ ನಿಟ್ಟಿನಲ್ಲಿ ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ತಿಳಿದುಕೊಂಡು ರಕ್ಷಣೆಯ ಹೊಣೆಗಾರಿಕೆಯನ್ನು ನಿಭಾಯಿಸಬೇಕೆಂದು ಹೇಳಿದರು.

ಪ್ರಾಧ್ಯಾಪಕರಾದ ಡಾ.ಬಸವರಾಜ ಹಿರೇಮಠ,ಗಂಗಾಧರ ಸ್ಥಾವರಮಠ, ಡಾ.ವೆಂಕಟೇಶ ಪೂಜಾರಿ, ಎಮ್.ಕೆ.ಬೋತಗಿ,ಡಾ.ಸಿ.ಬಿ ಗಂಧಿಗುಡಿ, ಎಮ್.ಡಿ.ಇರ್ಫಾನ್ ಇತರರು ಇದ್ದರು.

ಉಪನ್ಯಾಸಕ ಗುರಲಿಂಗಪ್ಪ ತುಂಗಳ ನಿರೂಪಿಸಿದರು, ಉಪನ್ಯಾಸಕ ಶಿವಶಂಕರ ಹಿರೇಮಠ ಸ್ವಾಗತಿಸಿದರು, ಉಪನ್ಯಾಸಕ ಎಮ್.ಕೆ.ಬೋತಗಿ ವಂದಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.