ಲಿಂಗಸುಗೂರ,ಮೇ.೨೮
ರಾಯಚೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ ದೂರ ದೃಷ್ಟಿ ಉಳ್ಳ ಜನಸೇವಕ ದಿನ ದಲಿತರ ಆಶಾಕಿರಣ ರಾಜ್ಯ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯರವರ ಪ್ರಸ್ತುತ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎನ್.ಎಸ್ ಬೋಸರಾಜು ಇವರಿಗೆ ನೀಡಿದ್ದರಿಂದ ಲಿಂಗಸುಗೂರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಟ್ಟಣದ ಗಡಿಯಾರ ಚೌಕ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನ ಸಚಿವ ಎನ್.ಎಸ್ ಬೋಸರಾಜು ಇವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ರಾಯಚೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಲು ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅನೀಶ್ ಪಾಶ ಇವರು ಅಭಿಪ್ರಾಯ ಪಟ್ಟಿದ್ದಾರೆ.
ಎನ್.ಎಸ್ ಬೋಸರಾಜುರವರು ಅಧಿಕಾರ ಇಲ್ಲದಿದ್ದರೂ ಕೂಡ ಅವರ ಪಕ್ಷ ನಿಷ್ಠೆ ಹಾಗೂ ಇವರ ಕಾರ್ಯ ಪ್ರವೃತ್ತಿಗೆ ಮೆಚ್ಚಿ ಪಕ್ಷದ ವರಿಷ್ಠರು ಸೂಕ್ತ ಸ್ಥಾನಮಾನ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ ಇಂತಹ ನಾಯಕನನ್ನು ಗುರುತಿಸಿದ ಪಕ್ಷದ ಹೈಕಮಾಂಡ್‌ಗೆ ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯದ ನಾಯಕರಿಗೆ ತುಂಬ ಹೃದಯದ ಅಭಿನಂದನೆಗಳು ಎಂದು ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಸಂಜೆ ವಾಣಿ ಪತ್ರಿಕೆ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಫಯಾಜ್ ಮಣಿಯಾರ ಹಾರುನ್ ಸಾಬ್ ಅಲ್ಲಾವುದ್ದೀನ್ ಪಟೇಲ್ ಯವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕುಪ್ಪಣ್ಣ ಕವಿತಾಳ ಸೋಮನಗೌಡ ಪಾಟೀಲ ಕರಡಕಲ್ ಶಿವರಾಯ ದೇಗುಲಮರಡಿ ಖಾಜಹುಸೇನ ಪೂಲ್ ವಾಲೆ ಶರಣಪ್ಪ ಕರಡಕಲ್ ರಾಘವೇಂದ್ರ ಬೀಮೇಶ ನಾಯಕ ಸೇರಿದಂತೆ ಇತರರು ಇದ್ದರು