ಬೋಸರಾಜ, ಹಂಪಯ್ಯ ನಾಯಕರಿಗೆ ಸಚಿವ ಸ್ಥಾನಕ್ಕೆ ನೀಡಲು ಮನವಿ- ಬಂಗ್ಲವಾಲೆ

ಮಾನ್ವಿ,ಮೇ.೧೯- ವಿಧಾನಸಭಾ ಕ್ಷೇತ್ರದಿಂದ ಅರವತ್ತನೆಯ ದಶಕದಲ್ಲಿ ಬಸವರಾಜೇಶ್ವರಿ ಇವರಿಗೆ ಹೊರತುಪಡಿಸಿ ಇಲ್ಲಿಯವರೆಗೆ ಯಾವೊಬ್ಬ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಿಲ್ಲ ಆದ್ದರಿಂದ ಕ್ಷೇತ್ರದ ಅಭಿವೃದ್ಧಿ ಬಾರಿ ಕುಂಠಿತವಾಗಿದ್ದು ಈ ಬಾರಿಯ ಸಚಿವ ಸಂಪುಟದಲ್ಲಿ ಮಾನ್ವಿ ಕ್ಷೇತ್ರದ ಪರಿಶಿಷ್ಟ ಪಂಗಡ ಹಾಗೂ ಮೂರನೇ ಬಾರಿ ಶಾಸಕರಾಗಿರುವ ಜಿ.ಹಂಪಯ್ಯ ನಾಯಕ ಇವರಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಶಾಸಕರ ಗೆಲುವಿಗಾಗಿ ಹಗಲಿರುಳು ಶ್ರಮಿಸಿರುವ ಎ ಐಸಿಸಿ ಕಾರ್ಯದರ್ಶಿ ಎನ್‌ಎಸ್‌ಎಸ್ ಬೋಸರಾಜ ಇವರಿಗೆ ವಿಶೇಷ ಕೋಟಾದಡಿಯಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಶೇಕ್ ಸತ್ತಾರ್ ಬಂಗ್ಲವಾಲೆ ಹೇಳಿದರು.
ಪಟ್ಟಣದ ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಪಕ್ಷದಿಂದ ಶಾಸಕರು ಆಯ್ಕೆಯಾಗುವುದಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ ಇವರು ಬಹಳ ಪರಿಶ್ರಮದಿಂದ ಪಕ್ಷದ ಸಂಘಟನೆಯನ್ನು ಮಾಡಿಲಾಗಿದೆ ಆದರಿಂದ ಇವರನ್ನು ಪರಿಗಣಿಸಿ ಸ್ಥಾನ ಸ್ಥಾನ ನೀಡಬೇಕು ಅದರಂತೆ ಮಾನವಿ ವಿಧಾನಸಭಾ ಕ್ಷೇತ್ರದ ಆರವತ್ತನೆ ದಶಕದಲ್ಲಿ ಅಂದಿನ ಶಾಸಕಿಯಾದ ಬಸವರಾಜೇಶ್ವರಿ ಇವರಿಗೆ ಸಚಿವ ಸ್ಥಾನ ವತರು ಪಡೆಸಿ ಇಲ್ಲಿಯವರೆಗೆ ಯಾರಿಗೂ ಸಚಿವ ಸ್ಥಾನ ನೀಡಿರದ ಕಾರಣದಿಂದ ಮಾನ್ವಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಆದರಿಂದ ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಪರಿಶಿಷ್ಟ ಪಂಗಡ ಅಡಿಯಲ್ಲಿ ಹಾಗೂ ಹಿರಿತನದ ಆಧಾರದ ಮೇಲೆ ಜಿ ಹಂಪಯ್ಯ ನಾಯಕ ಇವರಿಗೆ ಸಚಿವ ಸ್ಥಾನವನ್ನು ನೀಡುವಂತೆ ಪಕ್ಷದ ವರಿಷ್ಠರಿಗೆ ತಾಲೂಕ ಪಕ್ಷದಿಂದ ಒತ್ತಾಯಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಸೂಲ್ ಖುರೇಷಿ, ಕನಕಪ್ಪ ಯಾದವ್, ವಿಶಾಂತ್ ಈರಣ್ಣ, ಮೆಹಬೂಬ್ ಖುರೇಷಿ, ಲಿಂಗಪ್ಪ ಕರಡಿಗುಡ್ಡ, ಶೇಖ್ ಮುಖ್ತಿಯಾರ್, ಖಾದೀರ್ ನೈಕ್, ಸೇರಿದಂತೆ ಅನೇಕರು ಇದ್ದರು.