ಬೋಸರಾಜು ಹುಟ್ಟು ಹಬ್ಬ : ಸರಳ ಆಚರಣೆ

ಅನಾಥ ಮಕ್ಕಳಿಗೆ, ಕೋವಿಡ್ ಸೋಂಕಿತರಿಗೆ ಕಿಟ್ ವಿತರಣೆ
ರಾಯಚೂರು.ಜೂ.೦೫- ಕೊರೊನಾ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕರಾದ ಎನ್.ಎಸ್.ಬೋಸರಾಜು ಅವರ ೭೫ ನೇ ಜನ್ಮ ದಿನವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕೊರೊನಾ ಪೀಡಿತರಿಗೆ ನೆರವು ನೀಡುವ ಮೂಲಕ ಹುಟ್ಟು ಹಬ್ಬವನ್ನು ನಿರ್ವಹಿಸಲಾಯಿತು. ಅನಾಥಾಶ್ರಮದಲ್ಲಿ ಅನಾಥ ಮಕ್ಕಳಿಂದಲೇ ಬೋಸರಾಜು ಅವರ ಭಾವಚಿತ್ರವುಳ್ಳ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ನಿರ್ವಹಿಸಿದರು. ರವಿ ಬೋಸರಾಜು ಅವರು ಅಲ್ಲಿಯ ಎಲ್ಲಾ ಮಕ್ಕಳಿಗೆ ಉಪಹಾರವನ್ನು ನೀಡಿದರು. ಅಲ್ಲದೇ, ಮಕ್ಕಳು ಸೇರಿದಂತೆ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಡ್ರೈಫ್ರೂಟ್ಸ್ ಕಿಟ್ ನೀಡಲಾಯಿತು. ಅಲ್ಲದೇ, ಇಂದು ನಗರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದ ಜನರಿಗೆ ಊಟವನ್ನು ವಿತರಿಸಲಾಯಿತು.
ಸುಮಾರು ೨೦ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಗರದ ವಾರ್ಡ್ ೪ ರಲ್ಲಿ ಊಟ ಸಿದ್ಧಗೊಳಿಸಿ, ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸುವ ಮೂಲಕ ಅಲ್ಲಿ ವಿತರಿಸಲಾಯಿತು. ಬೋಸರಾಜು ಫೌಂಡೇಷನ್ ಅನೇಕ ಯುವಕರ ತಂಡ ಎಲ್ಲಾರಿಗೂ ಊಟದ ವ್ಯವಸ್ಥೆ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಬೋಸರಾಜು ಫೌಂಡೇಷನ್ ವತಿಯಿಂದ ನಗರ ವಿಧಾನಸಭಾ ಕ್ಷೇತ್ರ ಮತ್ತು ಮಾನ್ವಿ ಕ್ಷೇತ್ರಗಳಲ್ಲಿ ಆಹಾರ ಕಿಟ್ ವಿತರಿಸಲಾಗಿದೆ.