ಬೋಸರಾಜು ಹುಟ್ಟುಹಬ್ಬ-ಔಷಧ ವಿತರಣೆ

ಸಿರವಾರ.ಜೂ.೬-ಎಐಸಿಸಿ ಕಾರ್ಯದರ್ಶಿ ಹಾಗು ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್‌ಎಸ್ ಭೋಸರಾಜ ಅವರ ಹುಟ್ಟುಹಬ್ಬದ ಅಂಗವಾಗಿ ಜಿ.ಪಂ ಮಾಜಿ ಸದಸ್ಯ ಕೆ.ಅಸ್ಲಾ ಪಾಷ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊವೀಡ್ ಸಂಬಂಧಿಸಿದ ಔಷಧಿಗಳನ್ನು ವಿತರಿಸಲಾಯಿತು.
ಔಷಧಿ ವಿತರಿಸಿ ಎನ್‌ಎಸ್ ಭೋಸರಾಜ ಅವರು ಮಾತನಾಡಿ ಕೊವೀಡ್ ಸಂಕಷ್ಟದ ಸಮಯದಲ್ಲಿ ರೋಗ ನಿವಾರಣೆಗೆ ಎಲ್ಲಾರೂ ಪಕ್ಷಬೇದ ಮರೆತು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ ನಮ್ಮ ಪಕ್ಷದಿಂದ ಬೆಳಗ್ಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಬೇರೆ ಪಕ್ಷದವರು ಆಹಾರ ವ್ಯವಸ್ಥೆ ಮಾಡುತ್ತಿರುವುದು ಸಹ ಸ್ವಾಗತಾರ್ಹ. ಬಡವರ, ನಿರ್ಗತಿಕರ, ಪೌರ ಕಾರ್ಮಿಕರು ಸೇರಿದಂತೆ ಹಸಿದವರಿಗೆ ಅನ್ನ ನೀಡುವುದುವಪುಣ್ಯದ ಕೆಲಸ. ಇಂತಹ ಕಠಿಣ ಸಮಯದಲ್ಲಿ ರೋಗಿಗಳಿಗೆ ಹಾಗೂ ವಾರಿಯರ್ಸ್ ಔಷಧಿಗಳು ಸಹ ಅತ್ಯವಶ್ಯಕವಾಗಿದೆ. ಸರ್ಕಾರಗಳ ಸರಬರಾಜಿಗಿಂತ ಹೆಚ್ಚಿನ ಪ್ರಕರಣಗಳು ಬರುತ್ತಿರುವುದರಿಂದ ಪ್ರತಿಯೊಬ್ಬರಿಗು ಔಷಧಿ ಸಿಗಬೇಕಾಗಿದೆ. ಬಡರೋಗಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗೆ ಔಷದಿ ವಿತರಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಬಿವಿ ನಾಯಕ, ಜಿ.ಪಂ ಮಾಜಿ ಸದಸ್ಯ ಕೆ.ಅಸ್ಲಂಪಾಷ ಮಾತನಾಡಿದರು. ತಹಶೀಲ್ದಾರ ವಿಜಯೇಂದ್ರ ಹುಲಿನಾಯಕ, ಮುಖ್ಯಾಧಿಕಾರಿ ಮುನಿಸ್ವಾಮಿ, ವೈದ್ಯರಾದ ಡಾ.ಪರಿಮಳಾ ಮೈತ್ರಿ, ಡಾ.ಸುನೀಲ್ ಸರೋದೆ, ಮುಖಂಡರಾದ ಎಂ.ಶ್ರೀನಿವಾಸ, ಶಿವುಕುಮಾರ ಚುಕ್ಕಿ,ಶರಣಯ್ಯ ಗುಡದಿನ್ನಿ, ನಿರ್ಮಲ ಬೆಣ್ಣೆ,ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ, ರಮೇಶ ದರ್ಶನಕರ್,ಮಹಿಳಾ ಘಟಕ ಅದ್ಯಕ್ಷೆ ರೇಣುಕಾ.ಎನ್,ಚಂದ್ರುಕಳಸ, ಮೌಲಾಸಾಬ್ ವರ್ಚಸ್, ಸೂರಿ ದುರುಗಣ್ಣ, ಎಚ್.ಕೆ ಅಮರೇಶ, ನಾಗರಾಜ ಚಿನ್ನಾನ್, ಅಬ್ರಾಹಂ ಹೊನ್ನಟಗಿ, ಇರ್ಫಾನ್ ಬಡೇಗರ್,ಮಾರ್ಕಂಡಯ್ಯ ಶಿವರಾಜ ಬೆಳವಿನೂರು,ಯುವಘಟಕ ಅದ್ಯಕ್ಷ ಅಂಬು ನಾಯಕ ಇದ್ದರು.