ಬೋಸರಾಜು ಫೌಂಡೇಷನ್ : ಡೆಂಗ್ಯೂ, ಮಲೇರಿಯಾ ಜಾಗೃತಿ – ಪ್ರಚಾರ ವಾಹನ

ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ – ಜಾಗೃತಿಗೆ ಜಯಣ್ಣ ಸಲಹೆ
ರಾಯಚೂರು.ಸೆ.೨೫- ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ಇಂದು ಡೆಂಗ್ಯೂ ಮತ್ತು ಮಲೇರಿಯಾ ಜಾಗೃತಿ ಮತ್ತು ಮುಂಜಾಗ್ರತ ಕ್ರಮಗಳ ಬಗ್ಗೆ ಆಟೋ ಮೂಲಕ ಜನರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡುತ್ತಾ, ಡೆಂಗ್ಯೂ ಮತ್ತು ಮಲೇರಿಯಾ ವ್ಯಾಪಕವಾಗಿ ಹರಡಿಕೊಂಡಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ, ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಈಗಾಗಲೇ ಕೊರೊನಾ ಮೂರನೇ ಅಲೆಯ ನಿರೀಕ್ಷೆಯಲ್ಲಿ ಜನ ಆತಂಕಗೊಂಡಿದ್ದಾರೆ.
ಈ ಮಧ್ಯೆ ಸಾಂಕ್ರಾಮಿಕ ಡೆಂಗ್ಯೂ, ಮಲೇರಿಯಾ ಮತ್ತಿತರ ರೋಗಗಳು ಜನರನ್ನು ತೀವ್ರ ಅನಾರೋಗ್ಯ ಸ್ಥಿತಿಗೆ ತಳ್ಳಿವೆ. ಸಾರ್ವಜನಿಕರು ಡೆಂಗ್ಯೂ ಮತ್ತು ಮಲೇರಿಯಾಗಳಿಂದ ಸುರಕ್ಷಿತವಾಗಿರಲು ಎಲ್ಲಾ ಕಟ್ಟುನಿಟ್ಟಿನ ಕ್ರಮ ಪಾಲಿಸಬೇಕು. ಎನ್.ಎಸ್. ಬೋಸರಾಜು ಫೌಂಡೇಷನ್ ಈ ದಿಕ್ಕಿನಲ್ಲಿ ಅತ್ಯಂತ ಮಹತ್ವದ ಕಾರ್ಯಕ್ಕೆ ಇಂದು ಮುಂದಾಗಿದೆ. ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಮಾಹಿತಿಯೊಂದಿಗೆ ಯಾವ ರೀತಿ ಇದರಿಂದ ಸುರಕ್ಷಿತವಾಗಿರಬೇಕು ಎನ್ನುವುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಈ ಪ್ರಚಾರ ಸಾಮಾಗ್ರಿ ಹೊಂದಿದೆ.
ಸಾರ್ವಜನಿಕರು ಪ್ರತಿಯೊಬ್ಬರು ಈ ಸಲಹೆ, ಸೂಚನೆಗಳನ್ನು ಪಾಲಿಸುವ ಮೂಲಕ ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತವಾಗಿರಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಆರೋಗ್ಯ ಜೀವನವನ್ನು ಪ್ರತಿಯೊಬ್ಬರು ನೆಮ್ಮದಿಯಾಗಿ ನಿರ್ವಹಿಸಬೇಕು ಎನ್ನುವುದು ಬೋಸರಾಜು ಉದ್ದೇಶವಾಗಿದೆ. ಬೋಸರಾಜು ಫೌಂಡೇಷನ್ ಅನೇಕ ಸಾಮಾಜಿಕ ಚಟುವಟಿಕೆ ಕೈಗೊಂಡಿದೆ. ಕೊರೊನಾ ಮೊದಲನೇ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಿತ್ತು. ಈ ರೀತಿ ಒಂದಿಲ್ಲೊಂದು ಚಟುವಟಿಕೆ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಿದೆ. ಇಂದು ಸಾಂಕ್ರಾಮಿಕ ರೋಗ ತೀವ್ರಗೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡಿದರು.
ನಗರಸಭೆ ಮಾಜಿ ಸದಸ್ಯರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆ.ಶಾಂತಪ್ಪ ಅವರು ಮಾತನಾಡುತ್ತಾ, ಎನ್.ಎಸ್. ಬೋಸರಾಜು ಫೌಂಡೇಷನ್ ವತಿಯಿಂದ ಅತ್ಯುತ್ತಮ ಕಾರ್ಯ ಹಮ್ಮಿಕೊಳ್ಳಲಾಗಿದೆ. ಡೆಂಗ್ಯೂ ಮತ್ತು ಮಲೇರಿಯಾ ವ್ಯಾಪಕವಾಗಿ ಹರಡಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ಕರೀಂ, ಜಿಂದಪ್ಪ, ದರೂರು ಬಸವರಾಜ, ರುದ್ರಪ್ಪ ಅಂಗಡಿ, ಕುರುಬದೊಡ್ಡಿ ಆಂಜಿನೇಯ್ಯ, ರಮೇಶ, ತಿಮ್ಮಾರೆಡ್ಡಿ, ಅರುಣ್ ದೋತರಬಂಡಿ ಪಾಲ್ಗೊಂಡಿದ್ದರು.