ಬೋಸರಾಜು ಫೌಂಡೇಷನ್ – ಗ್ರಾಮೀಣ ಪ್ರದೇಶದ ಮಕ್ಕಳಿಗೆ ಊಟ

ರಾಯಚೂರು.ಜೂ.೦೩- ಬೋಸರಾಜು ಫೌಂಡೇಷನ್ ವತಿಯಿಂದ ನಗರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬಿರಿಯಾನಿ ವಿತರಣೆಯನ್ನು ಕೈಗೊಳ್ಳಲಾಯಿತು.
ನಗರದ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮನೆ ಮನೆಗೆ ಆಹಾರ ಕಿಟ್ ಮತ್ತು ಆಹಾರ ವಿತರಿಸಿದ ನಂತರ ಈಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಮಾದರಿಯಲ್ಲಿ ಶಾಲಾ ಮಕ್ಕಳಿಗೆ ಶಾಲಾ ಆವರಣಕ್ಕೆ ಬರುವಂತೆ ಮಾಡಿ, ಅಲ್ಲಿ ಆಹಾರ ಕಿಟ್ ವಿತರಿಸಲಾಗುತ್ತದೆ. ಇದಕ್ಕಾಗಿ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾರೀ ಪ್ರಮಾಣದಲ್ಲಿ ಊಟದ ವ್ಯವಸ್ಥೆ ಸಿದ್ಧತೆ ನಡೆದಿದೆ. ಕೊರೊನಾ ಮಹಾಮಾರಿಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರಿಗೆ ಊಟದ ತೊಂದರೆಯಾಗದಂತೆ ಈ ವ್ಯವಸ್ಥೆ ಕೈಗೊಳ್ಳಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಊಟ ನೀಡುವ ಮೂಲಕ ಬೋಸರಾಜು ಫೌಂಡೇಷನ್ ಕೊರೊನಾ ಸಂಕಷ್ಟದ ಸಮಯದಲ್ಲಿ ಇಡೀ ಕ್ಷೇತ್ರಕ್ಕೆ ದಿನಸು ಮತ್ತು ಊಟದ ವ್ಯವಸ್ಥೆ ನೀಡುವ ಕಾರ್ಯವನ್ನು ತೀವ್ರಗೊಳಿಸಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಊಟ ಪೂರೈಸುವ ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು ಮತ್ತು ಪಕ್ಷದ ಮುಖಂಡರು ಕೈಜೋಡಿಸಿದ್ದಾರೆ.