ಬೋಸರಾಜು ಫೌಂಡೇಷನ್ – ಆಹಾರ ಕಿಟ್ ವಿತರಣೆ

ರಾಯಚೂರು.ಜೂ.೦೨- ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ನಗರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿಂದು ಆಹಾರವನ್ನು ವಿತರಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೆರವಾಗಲು ಬೋಸರಾಜು ಫೌಂಡೇಷನ್ ನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮದ ವಾರಿಯರ್ಸ್‌ಗೆ ಊಟ ಒದಗಿಸಲು ಮುಂದಾಗಿದ್ದಾರೆ. ಆಶಾ ಕಾರ್ಯಕರ್ತರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಸೇರಿದಂತೆ ಇನ್ನಿತರರಿಗೆ ಊಟ ಮತ್ತು ನೀರು ಪೂರೈಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ಕಡೆ ವಿತರಣೆ ನಂತರ ಈಗ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಊಟದ ವಿತರಣೆಗೆ ವ್ಯವಸ್ಥೆ ಮುಂದಾಗಿದೆ. ಬೋಸರಾಜು ಫೌಂಡೇಷನ್ ಮುಖಂಡರು ಅಲ್ಲಿಯ ಜನರಿಗೆ ಊಟದ ಕಿಟ್ ವಿತರಿಸಿದರು.