ಬೋವಿ ಸಮಾಜದ ತಾಲೂಕು ಪದಾಧಿಕಾರಿಗಳ ಆಯ್ಕೆ: ಸನ್ಮಾನ

ಸಂಜೆವಾಣಿ ವಾರ್ತೆ
ಸಿಂಧನೂರು.ಜ.೨೭- ಬೋವಿ ಸಮಾಜದ ರಾಜ್ಯದ್ಯಕ್ಷರ ಆದೇಶದ ಮೇರೆಗೆ ಸಿಂಧನೂರು ತಾಲೂಕ ಘಟಕದ ಅದ್ಯಕ್ಷರಾದ ಲಕ್ಷ್ಮಣ್ ಬೋವಿ ಅವರ ನೇತೃತ್ವದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಗದ್ದೆಮ್ಮ ಅರಳಹಳ್ಳಿ ಅವರನ್ನು ಆಯ್ಕೆ ಮಾಡಿ,ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬೋವಿ ಸಮಾಜದ ರಾಜ್ಯದ್ಯಕ್ಷರು ಹಾಗೂ ತಾಲುಕ ಘಟಕದ ಅದ್ಯಕ್ಷರ ಆದೇಶದ ಮೇರೆಗೆ ಸರ್ವಾನುಮತದಿಂದ ಸಿಂಧನೂರು ತಾಲೂಕ ಮಹಿಳಾ ಘಟಕದ ಅದ್ಯಕ್ಷಳನ್ನಾಗಿ ಗದ್ದೆಮ್ಮ ಅರಳಹಳ್ಳಿ, ತಾಲೂಕ ಉಪಾದ್ಯಕ್ಷಳನ್ನಾಗಿ ಹೊನ್ನಮ್ಮ, ಚಿರತನಾಳ ಹೊಬಳಿ ಘಟಕದ ಅದ್ಯಕ್ಷರನ್ನಾಗಿ ಲಕ್ಷ್ಮಣ್, ಗಾಂಧಿನಗರಕ್ಕೆ ದುರಗಪ್ಪ ಅವರನ್ನು ಆಯ್ಕೆಗೊಳಿಸಿ ಸನ್ಮಾನಿಸಿದರು. ಸಮಾಜದ ಪ್ರತಿಯೊಬ್ಬರನ್ನೂ ಗಮನಕ್ಕೆ ತೆಗೆದುಕೊಂಡು, ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಹೇಳುತ್ತಾ ಸಮಾಜದ ಆರಾಧ್ಯ ದೈವವಾದ ಸಿದ್ದ ರಾಮೇಶ್ವರ ಜಯವಾಗಲಿ ಎಂದು ಘೋಷಣೆ ಗಳನ್ನು ಕೂಗಿದರು.
ಸಮಾಜದ ಹಿರಿಯರಾದ ವಿ.ಮರಿಯಪ್ಪ ಬಂಡಿ, ವಿರೇಶ ದೇವರಮನಿ ಆರ್.ಜಿ, ಮೆಲೋಡಿಸ್, ರಾಮಣ್ಣ ಜನತಾ ಕಾಲೋನಿ, ಮೇಘರಾಜ್ ಸೋಮಲಾಪುರ, ಹುಸೇನಪ್ಪ ಸೋಮಲಾಪುರ, ಶಂಕ್ರಪ್ಪ ಬ್ಯಾಡಗಿ, ಪ್ರಕಾಶ ಮಲ್ಲದಗುಡ್ಡ, ಶ್ಯಾಮಣ್ಣ ಕುರು ಕುಂದ, ನಾಗರಾಜ ಆಯನೂರು, ವೆಂಕೋಬ ಕಲ್ಲೂರು, ದುರಗಪ್ಪ ಕುರುಕುಂದಾ, ತಿಮ್ಮಾರಡ್ಡಿ ಸಾಸಲಮರಿ, ಶ್ಯಾಮಣ್ಣ ಮೆತ್ತಿನಾಳ, ಶಿವಕುಮಾರ ವಿರುಪಾಪುರ, ಶೇಖರಪ್ಪ ಸಿಂಧನೂರು, ವೆಂಕಟೇಶ ಬೋವಿ, ಚಿದಾನಂದ ಕಲ್ಲೂರು, ನಿರುಪಾದಿ ಕುರುಕುಂದಾ, ಪಂಪಾಪತಿ ಹಂಚಿನಾಳ ಸೇರಿದಂತೆ ಇತರರು ಭಾಗವಹಿಸಿದ್ದರು.