ಬೋವಿ ಸಮಾಜಕ್ಕೆ ಕುಲಕಸುಬೆಗೆ ಸಲಕರಣೆ ನೀಡಲು ಒತ್ತಾಯ

ರಾಯಚೂರು, ಜು.೨೦- ಬೋವಿ ಜನಾಂಗದವರಿಗೆ ಕುಲಕಸುಬೆಗೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ನಗರ ಮತ್ತು ಗ್ರಾಮೀಣ ಹಾಗೂ ತಾಲೂಕುಗಳಲ್ಲಿ ವಾಸಿಸುತ್ತಿರುವ ಬೋವಿ ಜನಾಂಗದವರು ಆರ್ಥಿಕ ಪರಿಸ್ಥಿತಿಯಿಂದ ತೀರಾ ಕಡುಬಡವರಾಗಿದ್ದಾರೆ.ಸದರಿ ಬೋವಿ ಜನಾಂಗಕ್ಕೆ ಅವರ ಕುಲಕಸುಬೆಗೆ ಬೇಕಾಗುವ ಕಲ್ಲುಬಂಡೆ ಹೊಡೆಯುವ ಸಲಕರಣೆಗಳು ಯಾವುದೇ ಸರಕಾರ ಬಂದರೂ ಇಲ್ಲಿಯವರೆಗೆ ಯಾವುದೇ ಸಲಕರಣೆಗಳು ನೀಡಿಲ್ಲ.ಬೋವಿ ಜನಾಂಗದವರು ಇದುವರೆಗೂ ಸರಕಾರಕ್ಕೆ ಸಲಕರಣೆಗಳು ನೀಡಬೇಕೆಂದು ಒತ್ತಾಯ ಕೂಡ ಮಾಡಿಲ್ಲ. ಆದರೆ ಕಳೆದ ೨ ವರ್ಷಗಳ ಹಿಂದೆ ಕೋವಿಡ್ -೧೯ ಸಾಂಕ್ರಮಿಕ ರೋಗ ಬಂದು ಆರ್ಥಿಕ ಪರಿಸ್ಥಿತಿಯಿಂದ ತೀರಾ ಹಿಂದುಳಿದಿದ್ದಾರೆ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಿ ಕೂಡಲೇ ನಮ್ಮ ಜನಾಂಗದವರಿಗೆ ಅವರ ಕುಲಕಸುಬೆಗೆ ಅನುಕೂಲವಾಗುವಂತೆ – ಸಲಕರಣೆಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನುಮಂತು ರಾಮನಗರ,ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.