ಬೋಳಶಟ್ಟಿ ಸ್ಮಶಾನದ ಸುಧಾರಣೆಗೆ ಕನ್ನಡಪರ ಸಂಘಟನೆಗಳಿಂದ ಮನವಿ

ವಿಜಯಪುರ, ಏ.21-ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ನವನಿರ್ಮಾಣ ವೇದಿಕೆ ಜಂಟಿ ಸಂಘಟನೆಗಳು ವಿಜಯಪುರ ನಗರದ ವಾರ್ಡ ನಂ.34ರಲ್ಲಿ ಬರುವ ಬೋಳಶಟ್ಟಿ ಸ್ಮಶಾನದ ಸುಧಾರಣೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಬಹಳ ದಿನಗಳಿಂದ ಬೋಳಶೆಟ್ಟಿ ಸ್ಮಶಾನದ ಸುಧಾರಣೆಗಾಗಿ ಹಲವಾರು ಸಂಘಟನೆಗಳು ಮಹಾನಗರ ಪಾಲಿಕೆಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ಬೋ¼ಶೆಟ್ಟಿ ಸ್ಮಶಾನವು ಸುಧಾರಣೆಗೊಳ್ಳದೆ ಹಾಗೆ ಉಳಿದಿರುವುದು ಸಾರ್ವಜನಿಕರ ದುರ್ದೈವದ ಸಂಗತಿಯಾಗಿದೆ. ಸ್ಮಶಾನಕ್ಕೆ ಸಂಬಂಧಿಸಿದಂತೆ 2 ಎಕರೆ ಜಮೀನು ಹೊಂದಿದ್ದು ನೀರಿನ ವ್ಯವಸ್ಥೆ ಹಾಗೂ ಕೂಡಲು ಆಸನಗಳು ಮಳೆಗಾಲದಲ್ಲಿ ಮಳೆಯಾದರೆ ಸ್ಮಶಾನದಲ್ಲಿ ನೀರು ತುಂಬಿ ಗೇಟ್ ಹೋರಗೆ ನಿಲ್ಲುತ್ತದೆ. ಶವವನ್ನು ಹೂಳಲು ಅಥವಾ ಅಗ್ನಿಸ್ಪರ್ಷ ಮಾಡಲು ಸಾರ್ವಜನಿಕರಿಗೆ ಒಳಗಡೆ ಹೋಗಲು ಆಗುವುದಿಲ್ಲ. ಹೀಗಾಗಿ ಮೂಲಭೂತ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ತ್ವರಿತಗತಿಯಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕೆಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರವೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಭೀಮಶಂಕರಯ್ಯ ವಿರಕ್ತಮಠ ಮಾತನಾಡಿ, ವಾರ್ಡ ನಂ.34ರಲ್ಲಿ ಬರುವ ಇಬ್ರಾಹಿಂರೋಜಾ ಹಿಂದುಗಡೆ ಇರುವ ಬೋಳಶಟ್ಟಿ ಸ್ಮಶಾನಕ್ಕೆ ಸಂಬಂಧಿಸಿದ ಬಡಾವಣೆಗಳು ಕುಂಬಾರ ಗಲ್ಲಿ, ಗವಾರ ಗಲ್ಲಿ, ಅಡಕಿ ಗಲ್ಲಿ, ಹಳೆ ಶಹಾಪೇಟೆ, ಬನಗಾರಗಲ್ಲಿ, ಗ್ಯಾಂಗಬಾವಡಿ, ಸಂಗಮೇಶ್ವರ ಕಾಲೋನಿ, ಜಯನಗರ ಕಾಲೋನಿ, ನೇಹರು ನಗರ, ರಹೀಮ ನಗರ, ಮದಿನಾ ನಗರ, ಶಾಸ್ತ್ರಿ ನಗರ, ಹಬೀಬನಗರ, ಬಾವಸಾರ ನಗರ, ಮಾರುತಿ ಕಾಲೋನಿ, ಭವಾನಿನಗರ, ಸ್ವತಂತ್ರ್ಯ ಯೋಧರ ಕಾಲೋನಿ, ರಾಜಕುಮಾರ ಲೇಔಟ್, ಘೇವರಚಂದ ನಗರ, ಮಂಜುನಾಥ ನಗರ ಶಿವಾಜಿ ವೃತ್ತದಿಂದ ತೊರವಿಯ ಕನಕದಾಸ ವೃತ್ತದವರೆಗೆ ಸಂಬಂಧಿಸಿದ ಎಲ್ಲ ಬಡಾವಣೆಗಳು ಬೋಳಶೆಟ್ಟಿ ಸ್ಮಶಾನಕ್ಕೆ ಸಂಬಂಧಪಟ್ಟಿದ್ದು ಹೀಗಾಗಿ ಜಿಲ್ಲಾಡಳಿತವು ಸುಧಾರಣೆ ಮಾಡಿಕೊಡಬೇಕೆಂದರು.
ಶರಣಗೌಡ ಬಿರಾದಾರ ಸಾ ಹೊನಗನಹಳ್ಳಿ ಮಾತನಾಡಿ, ಅಭಿವೃಧ್ಧಿ ಕಾಮಗಾರಿಗಳು ಕೂಡಲೇ ಜರುಗಬೇಕು. ಸಾರ್ವಜನಿಕರ ಒಳ್ಳೆಯ ಕೆಲಸಗಳು ಇರುವುದರಿಂದ ಮಾನವೀಯತೆ ತೋರಿ ಜಿಲ್ಲಾಡಳಿತವು ತ್ವರತಿಗತಿಯಲ್ಲಿ ಕಾರ್ಯ ಪ್ರಾರಂಭಿಸಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಶಾಂತಾಬಾಯಿ ದಿಕ್ಸಂಗಿ, ಕಾಶಿಬಾಯಿ ಹಡಪದ, ತಯ್ಯುಬ ಶೇಖ್, ಎ.ಎಮ್. ಮಮದಾಪುರ, ಶಂಕರ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.