ಬೋಳಚಿಕ್ಕಲಕಿ ಗ್ರಾಮದಲ್ಲಿ ಬಿಜೆಪಿ ಗ್ರಾಮ ಚಲೋ ಪರಿಕ್ರಮ ಯಾತ್ರೆಗೆ ಚಾಲನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.16:ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೋಳ ಚಿಕ್ಕಲಕಿ ಗ್ರಾಮದಲ್ಲಿ ಕೇಂದ್ರ ಸರಕಾರ ಮಾಡಿರುವ ವಿವಿಧ ಸಾಧನೆಗಳ ಬಗ್ಗೆ ಹಾಗೂ ಗ್ರಾಮ ಚಲೋ ಪರಿಕ್ರಮ ಯಾತ್ರೆ ಕಾರ್ಯಕ್ರಮ ನೆರವೇರಿತು.
ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ )ಅವರ ಸೂಚನೆಯಂತೆ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಂಡಿದ್ದು. ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಬೋಳಚಿಕ್ಕಲಕಿ ಗ್ರಾಮದಲ್ಲಿ ಗೋ ಪೂಜೆ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಧುರೀಣ ಹಾಗೂ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಅವರು ಕೇಂದ್ರ ಸರಕಾರ ಹಲವಾರು ಜನಪರ ರೈತರ ,ಕಾರ್ಮಿಕರ, ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ರೈತರ ಮೇಲೆ ಅನೇಕ ರಿಯಾಯಿತಿಗಳನ್ನು ನೀಡಿರುವುದು ಹಾಗೂ ಇತ್ತೀಚಿಗೆ ಅಕ್ಕಿ. ತೊಗರಿ ಬೇಳೆ. ಉಳ್ಳಾಗಡ್ಡಿ ಹೀಗೆ ಅನೇಕ ದಿನನಿತ್ಯದ ಸಾಮಗ್ರಿಗಳಿಗೆ ಒದಗಿಸುವ ಕಾರ್ಯವನ್ನು ಮಾಡಲಿದ್ದಾರೆ. ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ರಾಜ್ಯ ಬಿ.ಜೆ.ಪಿ ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ. ಬಬಲೇಶ್ವರ ಮಂಡಲ ಅಧ್ಯಕ್ಷ ವಿಠ್ಠಲ ಕಿರಸೂರ. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ ಕೊಳಕೂರ. ರಾಜ್ಯ ಬಿಜೆಪಿ ಓ.ಬಿ.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕ ಡಬ್ಬಿ ಮಾತನಾಡಿದರು.
ಶಿವಗಿರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಲರಾಜ ರೆಡ್ಡಿ, ಡಿ.ಜಿ. ಬಿರಾದಾರ, ಬಸವರಾಜ ಕೋರಿ, ರಜಾಕಸಾಬ್ ವಾಲಿಕಾರ, ಅಯ್ಯಪ್ಪ ಮಿರ್ಜಿ, ರಾಮು ಜಾಧವ, ಬಸವರಾಜ ಕುರುವಿನಶೆಟ್ಟಿ, ಪರಶುರಾಮ ನಾಟಿಕಾರ ಹಾಗೂ ಗ್ರಾಮದ ಸುತ್ತಲಿನ ರೈತ ಬಾಂಧವರು, ರೈತ ಮಹಿಳೆಯರು .ಬಿ.ಜೆ.ಪಿ. ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.