ಬೋರಿಂಗ್‍ಕ್ಯಾಂಪು ಗ್ರಾಮದಲ್ಲಿ ಹತ್ತಿಬೆಳೆ ಕ್ಷೇತ್ರೋತ್ಸವ


ಸಂಜೆವಾಣಿ ವಾರ್ತೆ
 ಕುರುಗೋಡು.ನ.19  ಇಂದಿನ ಆಧುನಿಕ ಯುಗದಲ್ಲಿ ವೇದಾಸೀಡ್ಸ್ ಸಂಸ್ಥೆಯ ಪ್ಲಾಟಿನಂ ಹತ್ತಿ ಬೀಜದಿಂದ ಅಧಿಕಲಾಭಹೊಂದಬಹುದಾಗಿದೆ  ಎಂದು ಹೈದರಾಬಾದ್‍ನ ವೇದಾಸೀಡ್ಸ್ ಸಂಸ್ಥೆಯ ಜನರಲ್‍ಮ್ಯಾನೇಜರ್ ಹಡಪಶ್ರೀನಿವಾಸರಾವ್ ರೈತರಿಗೆ ಕರೆನೀಡಿದರು.
ಅವರು ಸಮೀಪದ ಬೋರಿಂಗ್ ಕ್ಯಾಂಪು ಗ್ರಾಮದಲ್ಲಿ ಡೊನೆಕಲ್‍ಮಾರೆಪ್ಪ ಎಂಬ ಪ್ರಗತಿಪರ ರೈತರ ಜಮೀನಿನಲ್ಲಿ ಬೆಳೆದ ವೇದಾಸೀಡ್ಸ್ ಸಂಸ್ಥೆಯ ಪ್ರಾಟಿನಂ ಬೀಜದಿಂದ ಬೆಳೆದ ಹತ್ತಿಬೆಳೆ ಕ್ಷೇತ್ರೋತ್ಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೇದಾಸಂಸ್ಥೆಯ ಪ್ಲಾಟಿನಂ ಬೀಜದಿಂದ ಬೆಳೆದ ಹತ್ತಿಗಿಡಕ್ಕೆ 1ಕ್ಕೆ ಸುಮಾರು 90 ರಿಂದ 100 ಹತ್ತಿಕಾಯಿಬಿಡುತ್ತವೆ.  ಆದ್ದರಿಂದ ರೈತರು ವೇದಾಸೀಡ್ಸ್ ಸಂಸ್ಥೆಯ ಪ್ಲಾಟಿನಂ ಬೀತ ಬಿತ್ತಿ ಅಧಿಕ ಲಾಭಪಡೆಯಬೇಕೆಂದು ನೆರೆದ ರೈತರಿಗೆ ಸಲಹೆ ನೀಡಿದರು. ಬಳ್ಳಾರಿಯ ಕಾರ್ತಿಕ್ ಆಗ್ರೋಸೀಡ್ಸ್ ಸೆಂಟರ್‍ನ ವ್ಯವಸ್ಥಾಪಕ ಬದ್ರಿನಾರಾಯಣ ಪ್ರಸ್ತಾವಿಕವಾಗಿ ಮಾತನಾಡಿ, ಇಂದಿನ ಸಂಕಷ್ಟದ ದಿನಗಳಲ್ಲಿ ಅತಿಯಾದ ಮಳೆಗೆ ಹಲವಾರು ಬೆಳೆಗಳು ನಾಷವಾಗಿವೆ. ಆದರೆ ವೇದಾಸೀಡ್ಸ್ ಸಂಸ್ಥೆಯ ಪ್ಲಾಟಿನಂ ಬೀಜದಿಂದ ಬೆಳೆದ ಹತ್ತಿಬೆಳೆಯ ಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸಿ 1 ಎಕರೆಗೆ ಸುಮಾರು 15 ರಿಂದ 20 ಕ್ವಿಂಟಾಲ್ ಹತ್ತಿ ಬರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಯುವ ವೇದಾಸೀಡ್ಸ್ ಸಂಸ್ಥೆಯ ಪ್ಲಾಟಿನಂ ಬೀಜದಿಂದ ರೈತರು ಸಮೃದ್ದ ಬೆಳೆಯಿರಿ ಎಂದು ಕರೆನೀಡಿದರು.
ವೇದಸೀಡ್ಸ್ ಸಂಸ್ಥೆಯ ಬಳ್ಳಾರಿ ಏರಿಯಾಮ್ಯಾನೇಜರ್ ಕುಡುತಿನಿ ಬಿ.ಪ್ರಕಾಶ್‍ರವರು ಹತ್ತಿಬೆಳೆ ಕ್ಷೇತ್ರೋತ್ಸವಕ್ಕೆ ಬಂದಂತಹ ರೈತರನ್ನು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ನಂತರ ಹತ್ತಿಬೆಳೆ ಸಮೃದ್ದವಾಗಿ ಬೆಳೆದ ರೈತರನ್ನು ಸನ್ನಾನಿಸಲಾಯಿತು. ವೇದಸೀಡ್ಸ್ ಸಂಸ್ಥೆಯ ಪ್ಲಾಟಿನಂ ತಳಿಯ ಡೀಲರ್‍ಗಳಾದ ಏಳುಬೆಂಚಿ ಚಂದ್ರಣ್ಣ ಮತ್ತು ಅಂಬರೇಷ್, ರೈತರಾದ ಡೊನೆಕಲ್ಲುಮಾರೆಪ್ಪ,  ಒಡ್ಡಿನಶರಣಪ್ಪ, ಬೀರಪ್ಪ, ದಾಸರತಿಮ್ಮಪ್ಪ, ಜಗದೀಶ್, ಕೆ. ಅಗರೆಪ್ಪ, ಎರ್ರಿಸ್ವಾಮಿ, ತಿಪ್ಪೇಸ್ವಾಮಿ, ಎನ್.ಎರ್ರಿಸ್ವಾಮಿ, ಎನ್.ನಾಗಪ್ಪ, ಎನ್.ನಾಗಪ್ಪ ಸೇರಿದಂತೆ ಏಳುಬೆಂಚಿ ಹಾಗು ಬೋರಿಂಗ್‍ಕ್ಯಾಂಪು ಗ್ರಾಮದ ನೂರಾರು ಮಂದಿ ರೈತರು ಇದ್ದರು.