ಬೋರವೇಲ್ ಕೊರೆದರೂ ತಪ್ಪದ ಕಿರುಕುಳ ಪ್ರತಿಭಟನೆ

ಶಹಾಪುರ:ಮಾ.12:ವಡಗೇರಾ ತಾಲುಕಿನ ಕುರುಕುಂದಾ ಗ್ರಾಮದ ಸರ್ವೆ ನಂ, 62ರ ಜಮೀನಿನಲ್ಲಿ ಕೆ,ಬಿಜೆಜೆನ್,ಎಲ್, ಎಸ್,ಸಿ,ಪಿ, ಯೋಜನಡಿಯಲ್ಲಿ ್ಲ ಬೊರ ಕೊರೆದು ಮೂರ್ನಾಲ್ಕು ವರ್ಷ ಕಳೆದರೂ ಹನಿ ನೀರಿಲ್ಲದೆ ಬೇಳೆ ಒಣಗುತ್ತಿವೆ, ಈ ಕುರಿತು ಖಾನಾಪುರ ಕೆಬಿಜೆಎನ್,ಎಲ್, ಕಚೇರಿಗೆ ಕೇಳಿದಲ್ಲಿ ಜೆಇಯವರು ಬೇದರಿಕೆ ಹಾಕುತ್ತಿದ್ದಾರೆ. ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕ,ರಾ, ದ,ಸಂ,ಸ, ಕ್ರಾಂತಿಕಾರಿ ಬಣ ಭೀ,ಗುಡಿ ಕೆಬಿಜೆಎನ್,ಎಲ್, ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ರಾಜ್ಯ ಸಂಘಟನಾಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಟೆಂಡರ ಗುತ್ತೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಅಜೀಜ ಐಕೂರ, ರೇವಣಸಿದ್ದಪ್ಪ ಮಾಲಗತ್ತಿ, ಮುತ್ತುರಾಜ ಹುಲಿಕೇರಿ. ಶ್ರೀನಿವಸ ಅಗ್ನಿ. ಮಲ್ಲಿಖಾರ್ಜುನ ಶೆಳ್ಳಿಗಿ ಹಣಮಂತ ಮೋರೆ. ಹುಲಿಗೆಪ್ಪ ಜಾಗೀರದಾರ. ಭೀಮಪ್ಪ ಲಕ್ಷ್ಮಪುರ ಭೀಮರಾಯ ಬೊಮನಳ್ಳಿ, ಸೇರಿದಂತೆ ಅನೇಕ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.