ಬೋರಳ ಗ್ರಾಮದಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಣೆ

ಔರಾದ : ಆ.4: ತಾಲೂಕಿನ ಬೋರಳ ಗ್ರಾಮದ ವಾಲ್ಮೀಕಿ ಮಂದಿರದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 75 ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಸುಧಾಕರ್ ಕೊಳ್ಳುರ ಮಾತನಾಡಿ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳು, ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳು, ಬಡವರ,ರೈತರ ಹಾಗೂ ಹಿಂದೂಳಿದ ವರ್ಗಗಳ ಅಭಿವೃದ್ಧಿಯ ಹಿತ ಚಿಂತಕರು , ಸಾಮಾಜಿಕ ನ್ಯಾಯದ ಪರಿವರ್ತಕರು ಅನ್ನಭಾಗ್ಯ ಯೋಜನೆ ಹರಿಕಾರರು ಅನೇಕ ಜನಪರ ಯೋಜನೆಗಳು ಜನರಿಗೆ ನೀಡಿದ ಅಪರೂಪದ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಎಂದು ತಿಳಿಸಿದರು.

ಸಿದ್ದರಾಮಯ್ಯರವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಪ್ರಯುಕ್ತ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ಪತ್ರಕರ್ತರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮಾಜಿಕ ಕೆಲಸ ಮಾಡುತ್ತಿರುವ ಗ್ರಾಮದ ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಾದೇವ ಜುಬರೆ, ಝರೆಪ್ಪ ಮಚಕೋರಿ, ಗ್ರಾಮ ಪಂಚಾಯತ್ ಸದಸ್ಯ ಮಾಧವ ಮಚಕೋರಿ, ಉಮಾಕಾಂತ್ ಸೋನೆ, ರಮೇಶ್ ಮಚಕೋರಿ,ದಿಲೀಪ , ಧನರಾಜ ಸೋನೆ, ಲಕ್ಷ್ಮಣ್ ಕೋಳಿ, ಮಾರುತಿ ಸಪರ್ಂಚ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.