ಬೋರನಹಳ್ಳಿ ಸೀರನಾಯಕನಹಳ್ಳಿ, ಕೋಳಿ ಕೂಗದ ಗ್ರಾಮಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.19: ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮಲಗಿದ್ದ ಜನರನ್ನು ಏಳಿಸುವುದೇ ಕೋಳಿಗಳಾಗಿದ್ದವು. ಮಲಗಿದ್ದವರ ಮನೆಯಲ್ಲಿ ಕೋಳಿ ಕೂಗಿದೆ ಎದ್ದೇಳು ಎಂದು ಹೇಳುತ್ತಿದ್ದರು. ಈ ಊರಿನಲ್ಲಿ ಕೋಳಿ ಕೂಗುವುದು ಹೋಗಲಿ ಕೋಳಿಯನ್ನೇ ಸಾಕದ ಊರು ಎಂದು ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಸಿದ್ಧಿಯನ್ನು ಪಡೆದು ಹೊರಹೊಮ್ಮಿದೆ.
ಬೋರನಹಳ್ಳಿ ಮತ್ತು ಸೀರನಾಯಕನಹಳ್ಳಿ ಗ್ರಾಮದಲ್ಲಿ ಸುಮಾರು 400 ಮನೆಗಳನ್ನು ಹೊಂದಿದ ಚಿಕ್ಕ ಗ್ರಾಮ ವಾಗಿದ್ದು ಈ ಗ್ರಾಮದಲ್ಲಿ ಕುರಿ, ಮೇಕೆ, ಎತ್ತು, ಎಮ್ಮೆ, ಎಲ್ಲಾ ಪ್ರಾಣಿಗಳನ್ನು ಸಾಕುತ್ತಾರೆ ಆದರೆ ಕೋಳಿಯನ್ನು ಮಾತ್ರ ಸಾಕಾಗುವುದಿಲ್ಲ.
ಪುರಾತನ ಕಾಲದಿಂದಲೂ ಈ ಊರಿನಲ್ಲಿ ಮಾಯಮ್ಮ ದೇವಿಯ ದೇವಸ್ಥಾನವಿದೆ. ಈ ದೇವಸ್ಥಾನವು ಊರಿನಿಂದ ಸುಮಾರು ಮೂರು ಕಿಲೋಮೀಟರ್ ದಲ್ಲಿ ಮಾಯಮ್ಮ ನೆಲೆ ಇದೆ ಮಾಯಮ್ಮ ದೇವತೆಯ ವ್ಯಾಪ್ತಿಯಲ್ಲಿ ಯಾರಾದರೂ ಅಲ್ಲಿನ ಕಟ್ಟಿಗೆ, ಮಣ್ಣು ತರುವುದಾಗಲಿ ಮಾಡಿದರೆ ಅಪಾಯವನ್ನು ಎದುರಿಸುವಂತೆ ಗ್ಯಾರಂಟಿ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಮಾಯಮ್ಮನ ಪ್ರತಿಯಾಗಿ ಊರಿನಲ್ಲಿಯೂ ಸಹ ಒಂದು ಮಾಯಮ್ಮ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಮಾಯಮ್ಮನ ಜಾತ್ರೆಗೆ ಕುರಿ ಮತ್ತು ಕೋಳಿಯನ್ನು ಬಲಿಕೊಡಬಹುದು ಆದರೆ ಕೋಳಿ ಮಾತ್ರ ಸಾಕುವಂತಿಲ್ಲ. ಮಾಯಮ್ಮ ದೇವಿಗೆ ಕೋಳಿ ಕೂಗುವುದು ಕೇಳಿಸಿದರೆ ಮಾಯಮ್ಮ ದೇವಿ ಕೋಪಿಸಿಕೊಳ್ಳುತ್ತಾಳೆ. ಮಾಯಮ್ಮ ದೇವಿ ಕೋಪಿಸಿಕೊಂಡರೆ ಊರಿಗೆ ಊರು ಸಮಸ್ಯೆಯನ್ನು ಎದುರಿಸು ಎದುರಿಸುವ ಪರಿಸ್ಥಿತಿ ಬಂದಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ನಂಬಿಕೆ:
ಸುಮಾರು ನೂರು ವರ್ಷದ ಹಿಂದೆ ಮಾಯಮ್ಮ ದೇವಿಯು ಅರ್ಚಕರ ಮೈದುಂಬಿ ಎಲ್ಲಾ ಮನೆಗೆ ತೆರಳಿ ನನಗೆ ಕೋಳಿ ದ್ವನಿ ಕಂಡು ಬಂದಲ್ಲಿ ನಿಮ್ಮ ತಲೆಯನ್ನು ತೆಗೆಯುತ್ತೇನೆ ಇಲ್ಲ ಕೋಳಿಯ ತಲೆಯನ್ನು ತೆಗೆಯುತ್ತೇನೆ ಎಂದು ಹೇಳಿದ್ದರು ಅಂದಿನಿಂದ ಹಿಂದಿನವರೆಗೂ ಯಾರು ಕೋಳಿ ಸಾಕಿಲ್ಲ ಮುಂದೇನು ಸಾಕುವುದಿಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು.
ನನ್ನ ನೆನಪಿಗೆ ಗೊತ್ತಿರುವ ಮಟ್ಟಿಗೆ ಸುಮಾರು 40 ವರ್ಷದ ಹಿಂದೆ ನಮ್ಮ ಊರಿನಲ್ಲಿ ಕೋಳಿ ಸಾಕಾಣಿಕೆಯನ್ನು ಮಾಡಿದ್ದೇವು. ಇಡೀ ಊರಿಗೆ ಊರು ವಾಂತಿ, ಭೇದಿಗಳಿಗೆ ತುತ್ತಾಗಿತ್ತು ಅಂದೇ ಕೋಳಿಯನ್ನು ಎಲ್ಲರು ಬೇರೆ ಕಡೆ ಸಾಗಣಿಕೆ ಮಾಡಿದ್ದೇವು ಕೆಲ ದಿನಗಳಲ್ಲಿ ವಾಂತಿ ಭೇದಿ ನಿಂತು ಹೋಯಿತು ಎನ್ನುತ್ತಾನೆ ಇಲ್ಲಿನ ಗ್ರಾಮಸ್ಥ ಪರಸಪ್ಪ.

ಕೋಟ್
ಈ ಮಾಯಮ್ಮ ದೇವಿಯ ಪವಾಡ ಬಹಳಷ್ಟಿದೆ, ಮಾಯಮ್ಮ ದೇವಿಯ ವ್ಯಾಪ್ತಿಯಲ್ಲಿ ಯಾರೂ ಕೋಳಿ ಫಾರಂ ಹಾಕಿಲ್ಲ ಕೋಳಿ ಫಾರಂ ಹೆಸರಿನಲ್ಲಿ ಬೋರ್ವೆಲ್ ಹಾಕಿದರೆ ನೀರು ಬಿದ್ದಿಲ್ಲ. ಕೆಲ ವರ್ಷದ ಹಿಂದೆ ಒಬ್ಬರು ಕೋಳಿ ಸಾಕಾಣಿಕೆಯನ್ನು ಮಾಡಿದ್ದರು. ಕೋಳಿ ಸಾಕಾಣಿಕೆ ಮಾಡಿ ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಸಮಸ್ಯೆಯ ಜೊತೆಗೆ ವಾಂತಿ, ಭೇದಿಯಾಯಿತು ಅಂದಿನಿಂದ ಇಂದಿನವರೆಗೂ ಯಾರು ಕೋಳಿ ಸಾಕುತ್ತಿಲ್ಲ ಯಾರು ಕೋಳಿ ಫಾರಂ ಹಾಕಲು ಮುಂದೆ ಹೋಗುತ್ತಿಲ್ಲ.
ಮೂಗಪ್ಪ ಗ್ರಾಮಸ್ಥ