ಬೋಯಿಂಗ್ ಆಸ್ಪತ್ರೆ:ಜಿಲ್ಲೆಗೆ ಮಂಜೂರು ಮಾಡಲು ಒತ್ತಾಯ

ರಾಯಚೂರು.ಮೇ.೨೦-ಅಮೇರಿಕಾದ ಬೋಯಿಂಗ್ ಆಸ್ಪತ್ರೆಯನ್ನು ಜಿಲ್ಲೆಗೆ ಮಂಜೂರು ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ತಾನಿಕ ಕಚೇರಿ ಅಧಿಕಾರಿ ಮುಖಂತರಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು , ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು,ಜಿಲ್ಲೆಯಲ್ಲಿ ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಆಸ್ಪತ್ರೆ ಇಲ್ಲದಿರುವುದು ಅತ್ಯಂತ ಶೋಚನೀಯ ಹಾಗೂ ದುರದೃಷ್ಟಕರ ಸಂಗತಿ. ಇಂತಹ ಸಂದರ್ಭದಲ್ಲಿ ಅಮೇರಿಕಾವು ಭಾರತಕ್ಕೆ ಸಹಾಯಹಸ್ತ ನೀಡಿದ್ದು , ನಮ್ಮ ರಾಜ್ಯಕ್ಕೆ ೦೨ ಬೋಯಿಂಗ್ ಆಸ್ಪತ್ರೆಗಳು ೨೦೦ ಬೆಡ್‌ಗಳು ಆಕ್ಸಿಜನ್ ಮತ್ತು ವೆಂಟಿಲೇಟರ್ ಸಹಿತ ಮಂಜೂರಾಗಿವೆ.
ಇದನ್ನು ಒಂದು ಬೆಂಗಳೂರಿನಲ್ಲಿ ಮತ್ತು ಇನ್ನೊಂದು ಕಲಬುರ್ಗಿ ಜಿಲ್ಲೆಗೆ ಮಂಜೂರಾಗಿರುತ್ತದೆ ಅಂತ ವಿಷಯ ತಿಳಿದುಬಂದಿರುತ್ತದೆ, ಕಲಬುರ್ಗಿಯಲ್ಲಿ ಈಗಾಗಲೆ ಅತ್ಯಾಧುನಿಕ ಆಸ್ಪತ್ರೆಗಳು ಹೊಂದಿರುತ್ತವೆ . ಅವುಗಳೆಂದರೆ ಇಎಸ್‌ಐ ೫೦೦ ಬೆಡ್‌ಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ , ಕಲಬುರ್ಗಿಯ ಎರಡು ಮೆಡಿಕಲ್ ಕಾಲೇಜ್ ೭೫೦ಬೆಡ್ ಆಸ್ಪತ್ರೆ, ಖಾಜಾ ಬಂದೇನವಾಜ್ ೭೫೦ ಬೆಡ್‌ಗಳ ಆಸ್ಪತ್ರೆ, ಜಯದೇವ್ ೫೦೦ ಬೆಡ್‌ಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಗುಲ್ಬರ್ಗಾ ಹಾರ್ಟ್ ಫೌಂಡೇಷನ್ ರೀಸರ್ಚ್ ಸೆಂಟರ್, ಹೆಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಹಾಗೂ ಇನ್ನೂ ೧೫ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇರುತ್ತವೆ ಅದರಿಂದ ಅಮೇರಿಕಾದ ಬೋಯಿಂಗ್ ಆಸ್ಪತ್ರೆಯನ್ನು ಜಿಲ್ಲೆಗೆ ಮಂಜೂರು ಮಂಜೂರು ಮಾಡಬೇಕೆಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಿನೋದ್ ರೆಡ್ಡಿ, ಮಂಜುನಾಥ್ ಹಾನಗಲ್ಲ, ಕೊಡಪ್ಪ, ಜಿ.ಮುನಿರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.