ಬೋಧನೆ ಶ್ರೇಷ್ಠ ವೃತ್ತಿ: ಡಾ ನಿಶಾತ ಆರೀಫ್ ಹುಸ್ಸೇನಿ

ಕಲಬುರಗಿ : ನ.18: ಬೋಧನಾ ಕೆಲಸ ಒಂದು ಶ್ರೇಷ್ಠ ವೃತ್ತಿಯಾಗಿದೆ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರವಹಿಸುತ್ತಾರೆ ಎಂದು ಕೆಬಿಎನ್ ವಿಶ್ವ ವಿದ್ಯಾಲಯದ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಶಿಕ್ಷಣದ ಡೀನ್ ಪೆÇ್ರ ನಿಶಾತ್ ಆರೀಫ್ ಹುಸ್ಸೇನಿ ನುಡಿದರು.

ಅವರು ಶುಕ್ರವಾರ ಕೆಬಿನ್ ವಿವಿಯು ಮುಸ್ಲಿಂ ವೃತ್ತಿಪರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬೋಧನೆ ಮಾಡುವುದು ಸುಲಭವಲ್ಲ. ಕಾಲಕ್ಕೆ ತಕ್ಕಂತೆ ಹೊಸ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಬೋಧನೆ ಪರಿಣಾಮಕಾರಿಯಾಗುತ್ತದೆ. ಅಲ್ಲದೇ ಪ್ರತಿ ಶಿಕ್ಷಕರು ಬೋಧನೆಗೂ ಮೊದಲು ಅಧ್ಯಯನ ಚಟುವಟಿಕೆ ಅಗತ್ಯವಿದ್ದು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಒಂದು ಉತ್ತಮ ಬಾಂಧವ್ಯ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಒಂದು ದಿನದ ಈ ತರಬೇತಿ ಕಾರ್ಯಕ್ರಮದಲ್ಲಿ ಎರಡು ಗೋಷ್ಠಿಗಳು ನಡೆದವು.

ಸೊಸೈಟಿ ಫಾರ್ ಕೆಮಿಸ್ಟ್ರಿ, ಇಂಡಿಯಾ ಫೌಂಡೇಶನ್, ಬೆಂಗಳೂರು, ಶಿಕ್ಷಕ ಅಭಿವರ್ಧಕರಾದ ಕರೀಮಾ ಅಂಜುಮ ಇವರು ಮೊದಲನೆಯ ಗೋಷ್ಠಿಯಲ್ಲಿ ವಿಡಿಯೋ ಮತ್ತು ಫೆÇೀಟೋಗಳನ್ನು ಬಳಸಿ ಮಕ್ಕಳಿಗೆ ಕಲಿಕೆಯನ್ನು ಆನಂದಮಯವಾಗಿಸುವ ಬಗ್ಗೆ ತರಬೇತಿ ನೀಡಿದರು.

ಎರಡನೇಯ ಗೋಷ್ಠಿಯಲ್ಲಿ ರಾಯಲ್ ಸೊಸೈಟಿ ಫಾರ್ ಕೆಮಿಸ್ಟ್ರಿ, ಇಂಡಿಯಾ ಫೌಂಡೇಶನ್, ಬೆಂಗಳೂರು, ಶಿಕ್ಷಕ ಅಭಿವರ್ಧಕರಾದ ಇಂದಿರಾ ನೈರ್ ಇವರು ತಂತ್ರಜ್ಞಾನದ ಸಹಾಯದಿಂದ ಬೋಧನೆಯನ್ನು ಚುರುಕುಗೊಳಿಸುವ ಬಗೆ ತರಬೇತಿ ನೀಡಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಅತಿಥಿ ಭಾಷಣಕಾರರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಅಭ್ಯರ್ಥಿಗಳಾದ ಅಥಿಯಾ ಫಿರ್ದೌಸ್, ಸೈಯದಾ ಗೌಸಿಯಾ, ಇಕ್ರಾ ಸುಲ್ತಾನ, ಫಿರ್ದೌಸ್ ಜಹಾನ್ ಇವರು ಪ್ರತಿಕ್ರಿಯೆ ನೀಡಿದರು. ಬಿ ಎಡ್ ಕಾಲೇಜಿನ ಉಪನ್ಯಾಸಕ ರಿಯಾಜ್ ಪಠಾನ ವಂದಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಾವೆದ್ ಅಖತರ ನಿರೂಪಿಸಿದರು.

ಡಾ. ಅತಿಯಾ, ಡಾ. ಜಹಾಂನಾರ,ಡಾ. ಅಬ್ರಾರ್, ಡಾ ಸಮೀನಾ, ಡಾ. ಮಿಲನ್, ಡಾ. ಆಫಷನ್, ಡಾ. ಅಥರ್, ಡಾ. ಅಬ್ರಾರ್, ಡಾ. ಅತಿವುಲ್ಲ, ಡಾ. ಸುನಿಲ್, ಡಾ. ವಿನೋದ್, ಡಾ. ಬದರಿನಾಥ್ ಮೆಹಬುಬ್ ಮುಲ್ಲಾರಿ, ಕುಡ್ಸಿಯ ಪರ್ವೀನ್,
ಡಾ. ಫೆಮಿದ, ಡಾ. ಜೈನಬ, ಡಾ. ಸಫಿ ಡಾ ನಮ್ರತಾ ಮುಂತಾದವರಿದ್ದರು.