ಬೋಧನಾ ವಿನಿಮಯ ಫಲಿತಾಂಶ ವೃದ್ಧಿಗೆ ಪೂರಕ

ಕಲಬುರಗಿ:ನ.3: ಪ್ರತಿಯೊಬ್ಬ ಬೋಧಕರಲ್ಲಿ ಒಂದೊಂದು ವಿಷಯ ಅಥವಾ ಅಂಶಗಳಲ್ಲಿ ವಿಶೇಷ ಜ್ಞಾನ, ಪರಿಣಿತಿ ಇರುತ್ತದೆ. ಶಾಲಾ-ಕಾಲೇಜುಗಳಿಗೆ ಪರಸ್ಪರ ಬೋಧಕರು ತೆರಳಿ ಬೋಧನೆ ಮಾಡವುದರಿಂದ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನ, ಕಲಿಕೆ ಪರಿಣಾಮಕಾರಿಯಾಗುವುದರ ಜೊತೆಗೆ ಫಲಿತಾಂಶ ಹೆಚ್ಚಳವಾಗಲು ಸಾಧ್ಯವಿದೆ ಎಂದು ಆಳಂದನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಡಾ.ಮಂಜುನಾಥ ಶೀಲಮೂರ್ತಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ಚೌಕ್ ಹತ್ತಿರವಿರುವ ‘ಸರ್ಕಾರಿ ಪಿಯು ಕಾಲೇಜು’ನಲ್ಲಿ ಗುರುವಾರ ಜರುಗಿದ ‘ಭೌತಸಾಸ್ತ್ರ ವಿಷಯದ ಒಂದು ದಿನದ ವಿಶೇಷ ಕಾರ್ಯಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದೀನ್ ಸಾಗರ ಮಾತನಾಡುತ್ತಾ, ನಮ್ಮ ಭಾಗದಲ್ಲಿ ಅನೇನ ಜನ ಪ್ರತಿಭಾವಂತ ಉಪನ್ಯಾಸಕರು, ಶಿಕ್ಷಕರು ಇದ್ದಾರೆ. ಅವರಲ್ಲಿರುವ ಜ್ಞಾನ ಎಲ್ಲೆಡೆ ಮುಟ್ಟಿಸಲು ‘ಪರಸ್ಪರ ಸಿಬ್ಬಂದಿ ವರ್ಗಾವಣೆ’ ಅಗತ್ಯವಾಗಿದೆ ಎಂದರು.
ಭೌತಶಾಸ್ತ್ರ ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭಾ ಕಮಲಾಪುರಕರ್, ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ರೇಣುಕಾ ಚಿಕ್ಕಮೇಟಿ, ನಿಯೋಜಿತ ಉಪನ್ಯಾಸಕರಾದ ಸಿದ್ದಾರೂಢ ಬಿರಾದಾರ, ದೇವೇಂದ್ರಪ್ಪ ಬಡಿಗೇರ್, ಅತಿಥಿ ಉಪನ್ಯಾಸಕಿ ಸಮೀನಾ ಬೇಗಂ, ರಂಜಿತಾ ಠಾಕೂರ್, ನುಝತ್ ಪರ್ವಿನ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.