ಬೋಧನಾ ಕೌಶಲ್ಯದಿಂದ ಕಲಿಕೆ ದೃಢ

ಕೋಲಾರ, ಜೂ. ೨೭:ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಉಂಟು ಮಾಡಬೇಕಾದರೆ ವಿನೂತನ ಹೊಸ ಪ್ರಯೋಗಗಳನ್ನು ಜಾರಿ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಬಾಲಾಜಿ ತಿಳಿಸಿದರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಶೈಕ್ಷಣಿಕ ಭೇಟಿ ನೀಡಿದ ಅವರು ಕಲಿಕೆಯಲ್ಲಿ ದೃಢತೆ – ಪ್ರಾಯೋಗಿಕ ಬೋಧನೆ ಮಾಡಿ ಮಾತನಾಡಿದರು.ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರಗಳು ಮತ್ತು ಇಲಾಖೆ ನೀಡುವ ನಿರ್ದೇಶನಗಳನ್ನು ಆಲಿಸುವುದು ಮತ್ತು ತರಬೇತಿ ಗಳಲ್ಲಿ ನೀಡಿದ ಮಾಹಿತಿಗಳನ್ನು ಯಥಾವತ್ ಶಾಲೆಗಳಲ್ಲಿ ಅನುಷನಗೊಳಿಸಿದ್ದರೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತದೆ ಎಂದರು.
ಆನೆ ಚಿತ್ರ ವಿದ್ಯಾರ್ಥಿಯ ಮನಸ್ಸಿನಲ್ಲಿ ನೋಡಬೇಕು, ಆನೆಯ ಆಕಾರ, ವಿಚಾರ, ಅದರ ಜೀವನ ಶೈಲಿ, ಅದರ ವಾಸಸ್ಥಳ ಅ ಬಗ್ಗೆ ನಾಲ್ಕು ವಾಕ್ಯಗಳನ್ನು ರಚಿಸುವ ಮಟ್ಟಕ್ಕೆ ವಿದ್ಯಾರ್ಥಿಯ ಪ್ರಗತಿ ಕಂಡರೆ ಬೋಧನೆ ಫಲಪ್ರದವಾಗಿದೆ ಎಂದು ಅರ್ಥ ಎಂದು ವಿಶ್ಲೇಷಿಸಿದರು.
ವಿಷಯವಾರು, ತರಗತಿವಾರು, ಆಯಾ ಕಾಲಗಳಿಲ್ಲಿ ಇಲಾಖೆ ನೀಡುವ, ವ್ಯಕ್ತಿಗಳನ್ನು ಪ್ರಾಮಾಣಿಕವಾಗಿ ಶಾಲೆಯ ಬೋಧನೆಯಲ್ಲಿ ತೊಡಗಿಸಿಕೊಂಡರೆ ಆದರ್ಶ ಪ್ರಾಯ ವಿದ್ಯಾರ್ಥಿಗಳನ್ನು ತಯಾರು ಮಾಡಬಹುದು ಮತ್ತು ಉತ್ತಮ ಶಿಕ್ಷಕರು ಎಂಬ ಗೌರವಕ್ಕೆ ಪಾತ್ರರಾಗುವಿರಿ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ. ಶ್ರೀನಿವಾಸ್ ಮಹಾ ಶಿಕ್ಷಕರಾದ ಪಿ, ಎಂ.ಗೋವಿಂದಪ್ಪ ಇತರರು ಉಪಸ್ಥಿತರಿದ್ದರು