ಬೋಧನಾ ಕೌಶಲ್ಯಕ್ಕಾಗಿ ಮಕ್ಕಳಿಂದ ಪಾಠ

ವಾಡಿ: ನ. 13: ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳೇ ಶಿಕ್ಷಕರಾಗಿ ಒಂದು ದಿನದ ಶಾಲಾ ಆಡಳಿತ ನಡೆಸಿದ ಬಲು ಅಪರೂಪದ ಪ್ರಯೋಗ ನಡೆಯಿತು.

ರಾವೂರಿನ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಆಡಳಿತ ಹಾಗೂ ಬೋಧನಾ ಕೌಶಲ್ಯ ಬೆಳೆಸಲು ಹಮ್ಮಿಕೊಂಡಿದ್ದ ಈ ವಿಶಿಷ್ಟ ಪ್ರಯೋಗದಲ್ಲಿ ನಾವು ಯಾರಿಗೇನು ಕಡಿಮೆಯಿಲ್ಲ ಎನ್ನುವಷ್ಟರ ಮಟ್ಟಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ತುಂಬಾ ಅಚ್ಚುಕಟ್ಟಾಗಿ ಹಾಗೂ ಸಮರ್ಥವಾಗಿ ತರಗತಿಗಳನ್ನು ನಿರ್ವಹಿಸಿದ ರೀತಿ ಎಲ್ಲರನ್ನು ಬೆರಗುಗೊಳಿಸುವಂತಿತ್ತು.

ವಿದ್ಯಾರ್ಥಿಗಳ ನಾಯಕನಾಗಿ ಆಯ್ಕೆಯದ ಹನುಮಾನಸಿಂಗ ತಂದೆ ವಿಜಯಕುಮಾರ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿದನು. ಅವರಿಗಾಗಿಯೇ ನಿಗದಿಪಡಿಸಲಾದ ವೇಳಾ ಪಟ್ಟಿಯ ಪ್ರಕಾರ ವಿಷಯವಾರು ವಿದ್ಯಾರ್ಥಿ ಶಿಕ್ಷಕಯರು ತಾವು ತಯ್ಯಾರು ಮಾಡಿಕೊಂಡು ಬಂದಿದ್ದ ಪಾಠದ ಟಿಪ್ಪಣಿಯನ್ನು ತರಗತಿಗೆ ತೆಗೆದುಕೊಂಡು ಹೋಗಿ ನಿರ್ಬಿತಿಯಿಂದ ಪಾಠ ಮಾಡಿದರು.

ಕೆಲವು ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರು ಯಾವ ಶೈಲಿಯನ್ನು ಅನುಸರಿಸಿ ಪಾಠ ಮಾಡಿದ್ದು ಎಲ್ಲರನ್ನು ನಗೆಗಡಲಲ್ಲಿ ತೆಲಿಸುವಂತೆ ಮಾಡಿದರು. ಗಣಿತ, ವಿಜ್ಞಾನ, ಸಮಾಜ ವಿಷಯಗಳನ್ನು ಪ್ರಯೋಗಗಳ ಮೂಲಕ ಪ್ರಾತ್ಯಕ್ಷಿಕವಾಗಿ ಎಲ್ಲರ ಮನಮುಟ್ಟುವಂತೆ ಬೋಧಿಸಿದರು.

ಸಂಸ್ಥೆಯ ಅದ್ಯಕ್ಷರಾದ ಪೂಜ್ಯ ಸಿದ್ಧಲಿಂಗ ದೇವರು ಮಕ್ಕಳ ಬೋಧನಾ ಕೌಶಲ್ಯ ಮತ್ತು ಸಾಮಾಥ್ರ್ಯವನ್ನು ಪ್ರತಿ ತರಗತಿಗೆ ಭೇಟಿ ನೀಡಿ ವೀಕ್ಷಿಸಿದರು. ಮತ್ತು ಅವರನ್ನು ಹುರಿದುಂಬಿಸುತ್ತಾ ಬೆನ್ನು ಚಪ್ಪರಿಸಿದರು.

ಮುಖ್ಯಗುರು ವಿಧ್ಯಾಧರ ಖಂಡಾಳ, ಈಶ್ವರಗೌಡ ಪಾಟೀಲ, ಸಿದ್ಧಲಿಂಗ ಬಾಳಿ, ಶಿವಕುಮಾರ ಸರಡಗಿ, ಸುಗುಣಾ ಕೋಳ್ಕೂರ, ಭುವನೇಶ್ವರಿ ಎಂ, ರಾಧ ರಾಠೋಡ, ಜ್ಯೋತಿ ತೆಗನೂರ, ಭಾರತಿ ಪರೀಟ, ಮಂಜುಳಾ ಪಾಟೀಲ ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂದಿಸಿದಂತೆ ಮಕ್ಕಳನ್ನು ಆಯ್ದುಕೊಂದು ವಾರಗಳ ಕಾಲ ತರಬೇತಿ ನೀಡಿ ಅವರನ್ನು ತಯ್ಯಾರು ಮಾಡಿದರು,

ಒಟ್ಟು 25 ವಿಧ್ಯಾರ್ಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಹತ್ತನೆ ತರಗತಿಯ ಹಣಮಂತ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದನು. ಉಳಿದಂತೆ ಸಮರ್ಥ, ಸಚಿನ, ತಬಸುಮ್, ಐಶ್ವರ್ಯ, ಸಾಯಿಕುಮಾರ, ಹರಮೈನ್, ಬಸವರಾಜ, ಭೀಮರಾಯಗೌಡ, ನಾಗವೇಣಿ, ಅಂಬಿಕಾ, ವೆಂಕಟೇಶ, ತಬಸುಮ್ ಸೇರಿದಂತೆ ಎಲ್ಲರೂ ಉತ್ತಮ ಪಾಠ ಬೋಧನೆಮಾಡಿ ಸೈ ಎನಿಸಿಕೊಂಡರು.

ಪೂಜ್ಯ ಸಿದ್ಧಲಿಂಗ ದೇವರು ಉತ್ತರಾಧಿಕಾರಿಗಳು

ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅವರಲ್ಲಿ ಪಾಠ ಬೋಧನೆ ಕೌಶಲ್ಯ ಹಾಗೂ ಆಡಳಿತ ನಿರ್ವಹಣಾ ಸಾಮಾಥ್ರ್ಯ ಬೆಳೆಸಲು ಹಮ್ಮಿಕೊಂಡ ಒಂದು ದಿನದ ಶಾಲಾ ಆಡಳಿತವನ್ನು ಹಮ್ಮಿಕೊಂಡಿರುವುದು ಶಿಕ್ಷಕರ ಮತ್ತು ಮಕ್ಕಳ ಕ್ರಿಯಾಶೀಲತೆಯನ್ನು ಬಿಂಬಿಸುತ್ತದೆ . ಮಕ್ಕಳ ಕಲಿಕಾ ಮತ್ತು ಬೋಧನಾ ಸಾಮಾಥ್ರ್ಯ ವೃದ್ದಿಗೆ ಇನ್ನು ಮುಂದೆಯೂ ಇಂತಹ ವಿಭಿನ್ನ ಪ್ರಯೋಗಗಳು ನಡೆಯುತ್ತವೆ.

ತಬಸುಮ್ ತಂದೆ ನಸಿರೊದ್ದಿನ್

( 10 ನೇ ತರಗತಿ ವಿಧ್ಯಾರ್ಥಿನಿ) – ಒಂದು ದಿನದ ಶಾಲಾ ಆಡಳಿತದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ತುಂಬಾ ಖುಷಿ ನೀಡಿತು, ಯಾವ ರೀತಿ ಪಾಠ ಮಾಡಬೇಕು ಎಂಬುದನ್ನು ನಮ್ಮ ಶಿಕ್ಷಕರು ಮೊದಲೆ ಹೆಳಿದ್ದರಿಂದ ಸರಳವಾಯಿತು. ಈಗ ಸ್ವಲ್ಪ ಧೈರ್ಯ ಬಂದಿದೆ, ಇಂತಹ ಅವಕಾಶ ಮಾಡಿಕೊಟ್ಟ ನಮ್ಮ ಶಿಕ್ಷಕರಿಗೆ ಅನಂತ ಧನ್ಯವಾದಗಳು.