ಬೊವಿ ಸಮಾಜಕ್ಕೆ ಸಿಗದ ಟಿಕೇಟ್: ರಾಜಕೀಯ ‌ಪಕ್ಷಗಳ‌ ಮೇಲೆ ಇಮ್ಮಡಿ ಶ್ರೀ ಅಸಮಾಧಾನ

ಚಿತ್ರದುರ್ಗ,ಏ.14: ಬೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಮೇಲೆ ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಬೋವಿ ಗುರುಪೀಠದಲ್ಲಿ ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾರನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವರಾದ ಅರವಿಂದ‌ ಲಿಂಬಾವಳಿ ಹಾಗೂ ಗೂಳಿಹಟ್ಟಿ ಶೇಖರ್ ಅವರಿಗೆ ಟೀಕೆಟ್ ನೀಡದೆ ಕಡೆಗಣನೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಕಳೆದ ಭಾರೀ ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದ ಅಖಂಡ ಶ್ರೀನಿವಾಸ್ ಅವರಿಗೆ ಟೀಕೆಟ್ ನೀಡದೆ ಕಡೆಗಣನೆ ಮಾಡಲಾಗಿದೆ. ಇದು ಬೋವಿ ಸಮಾಜವನ್ನು ನಿರ್ಲಕ್ಷ್ಯ ಮಾಡಿದಂತಾಗಿದೆ. ಈ ಹಿಂದೆ 8-10 ಜನ ಬೋವಿ ಸಮುದಾಯದವರಿಗೆ ಟಿಕೆಟ್ ನೀಡುತ್ತಿದ್ದರು. ಅದೇ ರೀತಿ ಈ ಭಾರೀಯೂ ಸಮಾಜದವರಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡುವಂತೆ ಆಗ್ರಹಿಸಿದ ಶ್ರೀಗಳು, ಒಂದು‌ ವೇಳೆ ಬೋವಿ ಸಮುದಾಯವನ್ನು ಕಡೆಗಣಿಸಿದಲ್ಲಿ ಅಂತಹ ಪಕ್ಷಗಳನ್ನು ಸಮುದಾಯ ಕೈಬಿಡಲಿದೆ ಎಂದು‌ ಎಚ್ಚರಿಸಿದರು.ಭಾರತೀಯ ಜನತಾ ಪಕ್ಷದಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಗೆ ಟಿಕೆಟ್ ನೀಡಬೇಕು. ಅಖಂಡ ಶ್ರೀನಿವಾಸ್ ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು‌. ಇಲ್ಲವಾದಲ್ಲಿ ಬೋವಿ ಸಮಾಜದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.