ಬೊಳೇಗಾಂವ ಶಾಲೆಯಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧನೆ

ಇಂಡಿ: ಮೇ.1:ತಾಲೂಕಿನ ಬೊಳೇಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ನಡೆ-ಮತಗಟ್ಟೆ ಕಡೆ ಅಭಿಯಾನದ ನಿಮಿತ್ತ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಅಭಿಯಾನದಲ್ಲಿ ಹಿರೇರೂಗಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಬಬಲಾದ,ಗ್ರಾಮ ಲೆಕ್ಕಾಧಿಕಾರಿ ಶ್ರೀಶೈಲ ಹಂಚಿನಾಳ,ಮುಖ್ಯ ಶಿಕ್ಷಕರಾದ ಶಾರದಾ ಹಿರೇಮಠ,ಶಿಕ್ಷಕರಾದ ಕಾಶೀಬಾಯಿ ಬಿರಾದಾರ, ಮಲ್ಲಮ್ಮ ಗಿರಣಿವಡ್ಡರ,ಈರಣ್ಣ ಹುಣಸಗಿ, ರಾಜಶ್ರೀ ಕೊಳೆಕರ,ಎ ಎಸ್ ವರಕನಳ್ಳಿ,ಹಿರೇರೂಗಿ ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕ ಅನಿಲ ಪತಂಗಿ,ಶಿಕ್ಷಕ ಎಸ್ ಆರ್ ಚಾಳೇಕಾರ,
ಪಂಚಾಯಿತಿ ಸಿಬ್ಬಂದಿಗಳಾದ ಅಕ್ಬರ ಕೊರಬು, ಶ್ರೀಧರ ಬಾಳಿ,ಶರಣು ನಾಟೀಕಾರ,ಬಸವರಾಜ ತಳಕೇರಿ,ಸಚಿನ ಹೊಸೂರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಬಿ ಎಲ್ ಓ ಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.