ಬೊರವೆಲ್‍ಗಳ ದುರಸ್ತಿ ಕೈಗೊಳ್ಳಲು ಜೈಕನ್ನಡಿಗರ ಸೇನೆ ಆಗ್ರಹ

ಕಲಬುರಗಿ,ನ.10- ಮಹಾನಗರದ ತಾರಫೈಲ ಬಡಾವಣೆಯ 13 ಮತ್ತು 14ನೇ ಕ್ರಾಸ್‍ನಲ್ಲಿರುವ ಬೋರವೆಲ್‍ಗಳು ಕೆಟ್ಟು ಹೋಗಿದ್ದು, ಇವುಗಳ ದುರಸ್ಥಿ ಕೈಗೊಳ್ಳುವಂತೆ ಜೈಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನಗರದ ವಾರ್ಡ ನಂ.48ರಲ್ಲಿ ಬರುವ ತಾರಫೈಲ ಬಡಾವಣೆಯ ಕ್ರಾಸ್ 13 ಮತ್ತು 14ನೇ ಕ್ರಾಸನಲ್ಲಿರುವ 5-6 ಬೊರವೆಲ್ ಕೊಳವೆ ಬಾವಿಗಳು ಕೆಟ್ಟು ಹೋಗಿದ್ದು, ಇಲ್ಲಿನ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉದ್ಭವಿಸಿದೆ.
ಈ ಬಡಾವಣೆಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಅವರು ಇಲ್ಲಿನ ಬೊರವೇಲಗಳ ನೀರನ್ನು ದಿನಬಳಕೆಗೆ ಬಳಸುತ್ತಾರೆ. ಒಂದರ ನಂತರ ಒಂದರಂತೆ ಇಲ್ಲಿನ 5-6 ಬೊರವೆಲ್ ಗಳು ಕೆಟ್ಟು ಹೋಗಿದ್ದರೂ ದುರಸ್ಥಿ ಕೈಗೊಳ್ಳದೇ ಇರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ.
ತಕ್ಷಣವೇ ಇಲ್ಲಿನ ಕೊಳವೆ ಬಾವಿಗಳನ್ನು ದುರಸ್ಥಿ ಕೈಗೊಳ್ಳಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗೆ ಸೇನೆಯ ಅಧ್ಯಕ್ಷ ದತ್ತು ಭಾಸಗಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದೆ. ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಆನಂದ ಕೇಶ್ವರ, ರಾಜು ಕಣ್ಣೂರ, ಪ್ರಶಾಂತ ಬಾಪುನಗರ, ವಿಶ್ವಮಿತ್ರ ಸಾಗರ ಸಿಂಗೆ, ಅಮರ ಯಾದವ ಸೇರಿದಂತೆ ಹಲವರಿದ್ದರು.