
ಕಲಬುರಗಿ,ಮೇ 22:ಬಿಜೆಪಿ ಸರ್ಕಾರದ ಭರವಸೆಗಳು ಹಾಗೂ ಅವುಗಳನ್ನು ಈಡೇರಿಸದಿರುವುದರ ಬಗ್ಗೆ ನೆನಪಿಸಿ ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಟಕ್ಕರ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರ ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರೆಂಟಿಗಳನ್ನು ಈಡೇರಿಸಿಲ್ಲ ಎನ್ನುವ ಬೊಮ್ಮಾಯಿ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರ 600 ಚುನಾವಣೆ ಪೂರ್ವ ಭರವಸೆ ನೀಡಿತ್ತು. ಅವುಗಳಲ್ಲಿ ಕೇವಲ 50 ಭರವಸೆಗಳನ್ನೂ ಕೂಡಾ ಈಡೇರಿಸಿಲ್ಲ.ದೇಶದ ಜನರು ಸ್ಮಾರ್ಟ್ ಸಿಟಿ ಯೋಜನೆ, ಕಪ್ಪು ಹಣ ವಾಪಸ್, ಪ್ರತಿ ಅಕೌಂಟ್ ಗೆ 15 ಲಕ್ಷ ರೂಪಾಯಿ, ಉದ್ಯೋಗ, ಭ್ರಷ್ಟಾಚಾರ ತಡೆಗೆ ಕ್ರಮದ ಬಗ್ಗೆ ಇನ್ನೂ ಕಾಯುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.