ಬೊಮ್ಮಘಟ್ಟ ಹುಲಿಕುಂಟೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 3: ಚೋರುನೂರು ಹೋಬಳಿ ತಾಲೂಕಿನ ಐತಿಹಾಸಿಕ ಹಾಗೂ ವಿಜಯನಗರ ಕಾಲದ ಪ್ರಸಿದ್ದ ಶ್ರೀ ಹುಲಿಕುಂಟೆಶ್ವರ ಸ್ವಾಮಿ ದೇವಾಲಯ ಹುಲಿಕುಂಟೇಶ್ವರ ರಥೋತ್ಸವವು ಬಹು ಅದ್ದೂರಿಯಾಗಿ ನೇರವೇರಿತು, ಇದಕ್ಕೆ ಸುತ್ತಲಿನ ಹಾಗೂ ಬೇರೆ ರಾಜ್ಯದ ಭಕ್ತರು ಸಹ ಸಾಕ್ಷಿಯಾದರು.
ರಥೋತ್ಸವಕ್ಕೂ ಪೂರ್ವದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ಹೋಮ, ಹವನ, ನೇರವೇರಿಸಿ ರಥೋತ್ಸವ ಸಂಜೆ ಮುಕ್ತಾಯ ಗೊಂಡಿತು.ಈ ಸಂದರ್ಭದಲ್ಲಿ ನೆರೆ ರಾಜ್ಯ ಆಂದ್ರಪ್ರದೇಶ, ಮಂತ್ರಾಲಯ, ಮಹರಾಷ್ಟ್ರಗಳಿಂದಲೂ ಸಹ ಭಕ್ತರು ಅಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರೆ, ಸುತ್ತಲಿನ ಗ್ರಾಮಗಳಾದ ಚೋರನೂರು, ಗೊಲ್ಲಲಿಂಗಮ್ಮನಹಳ್ಳಿ, ತೊಣಸಿಗೇರಿ, ಕೂಡ್ಲಿಗಿ, ಬಂಡ್ರಿ, ಉಪ್ಪಾರಹಳ್ಳಿ, ಮಲ್ಲಾಪುರ ಇತರ ಸುತ್ತಲಿನ ಭಕ್ತರು ಅಗಮಿಸಿ ಭಕ್ತಿಯನ್ನು ಸಮರ್ಪಿಸಿದರು.

One attachment • Scanned by Gmail