
ಬೀದರ್: ಮಾ.7:ದಕ್ಷಿಣ ಕ್ಷೇತ್ರದ ಬಂಬುಳಗಿ ಗ್ರಾಮದಲ್ಲಿ ಆಯೋಜಿಸಿದ್ದ ಮಾಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿಯನ್ನು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಅನಾವರಣ ಗೊಳಿಸಿದರು.
ಈ ಸಂದರ್ಭದಲ್ಲಿ ತಿಂಥಣಿ ಕಾಗಿನೆಲೆ ಕನಕ ಪೀಠ ಮಾಹಾ ಸಂಸ್ಥಾನ ಪೂಜ್ಯ ಗುರುಗಳಾದ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೊಲ್, ಸಂತೋಷ ಜೋಳದಾಪಕೆ, ಗ್ರಾಮದ ಮುಖಂಡರಾದ ಶರಣಪ್ಪ ದೇವನೋರ, ಪಂಡಿತ ವಾಡೆದೊರ, ಪಂಡಿತ, ಮನೋಹರ, ಶಾಮರಾವ ಬಂಬುಳಗಿ, ತಾಜೋದ್ದಿನ್ ಬಂಬುಳಗಿ, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ರಾಜಕುಮಾರ ಮಡಕಿ, ಚಂದ್ರಕಾಂತ ಶೇರಿಕಾರ, ಸಂತೋಷ ಕಮಲಪೂರ ಖುದುಸ್ ನಾಗನಕೇರಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ, ಫಸಿ ಪಟೇಲ್, ಉಪಾಧ್ಯಕ್ಷರಾದ, ಶಾಂತಮ್ಮ, ಸದಸ್ಯರಾದ, ಖಾದ್ರಿ, ಪ್ರಕಾಶ ಭಾಲೆ, ಶ್ರೀದೇವಿ, ಸಮಾಜ ಮುಖಂಡರಾದ ಗಣಪತಿ ಮಲಗೊಂಡ, ಬೀರಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.