ಬೊಮ್ಮಗೊಂಡೇಶ್ವರ ತತ್ವ ಪಾಲಿಸಿ

ಬೀದರ್:ಮಾ.14: ಬೊಮ್ಮಗೊಂಡೇಶ್ವರ ಮಹಾ ಪುರುಷರಾಗಿದ್ದರು. ಅವರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಬೊಮ್ಮಗೊಂಡೇಶ್ವರ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಬೊಮ್ಮಗೊಂಡೇಶ್ವರರು ಜಿಲ್ಲೆಗೆ ನೀಡಿದ ಕೊಡುಗೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬೊಮ್ಮಗೊಂಡೇಶ್ವರ ಉತ್ಸವ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.

ಬೊಮ್ಮಗೊಂಡೇಶ್ವರ ಜೀವನ ಹಾಗೂ ಸಾಧನೆ ಮೇಲೆ ಬೆಳಕು ಚೆಲ್ಲಲು ಉತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರ ಶ್ರಮ ಹಾಗೂ ಸಹಕಾರದಿಂದ ಯಶ ಕಂಡಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ನುಡಿದರು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ, ರೆವರೆಂಡ್ ನೆಲ್ಸನ್, ಶಾಸಕ ರಹೀಂಖಾನ್, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಭಂತೆ ಸಂಘ ರಖ್ಖಿತ, ಮಾಳಿಂಗರಾಯ ಮಹಾರಾಜ, ಮೌಲಾನಾ ಮಹಮ್ಮದ್ ಮೋನಿಸ್ ಕಿರ್ಮಾನಿ, ಮಚ್ಚೇಂದ್ರನಾಥ ಮಹಾರಾಜ ನೇತೃತ್ವ ವಹಿಸಿದ್ದರು.

ಮುಖಂಡರಾದ ಎಂ.ಎಸ್. ಕಟಗಿ, ಗೀತಾ ಪಂಡಿತರಾವ್ ಚಿದ್ರಿ, ಅಬ್ದುಲ್ ಮನ್ನಾನ್ ಸೇಠ್, ಮಾಳಪ್ಪ ಅಡಸಾರೆ, ಶರಣಪ್ಪ ಮಿಠಾರೆ, ಶಿವಶಂಕರ ನೀಲಮನಳ್ಳಿ, ರತಿಕಾಂತ ಜೋಜನಾ, ತುಕಾರಾಮ ಚಿಮಕೋಡ್, ಸುನೀಲ್ ಚಿಲ್ಲರ್ಗಿ, ಬೊಮ್ಮಗೊಂಡ ಚಿಟ್ಟಾವಾಡಿ, ಬಾಲಾಜಿ ಖೇಡಕರ್, ಜ್ಞಾನೇಶ್ವರ ಹಿಪ್ಪಳಗಾಂವ್, ವಿಜಯಕುಮಾರ ಬ್ಯಾಲಹಳ್ಳಿ, ಕೆ.ಡಿ. ಗಣೇಶ, ರವಿ ಸಿರ್ಸಿ, ರಾಜೇಶ ಮೇತ್ರೆ ಮತ್ತಿತರರು ಇದ್ದರು.

ಸಂಜೀವಕುಮಾರ ಅತಿವಾಳೆ ಸ್ವಾಗತಿಸಿದರು. ನಾಗೇಶ ಜಾನಕನೋರ ನಿರೂಪಿಸಿದರು. ಎಂ.ಪಿ. ವೈಜಿನಾಥ ವಂದಿಸಿದರು.