ಬೊಬ್ಬಕುಂಟೆ ರೈತ ಆತ್ಮಹತ್ಯೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.16:  ತಾಲೂಕಿನ ಬೊಬ್ಬಕುಂಟೆ ಗ್ರಾಮದ ಕೆ.ಹನುಮಂತರಾಯ (40)  ಎಂಬ ರೈತ  ಬೆಳೆನಷ್ಟದಿಂದ ಸಾಲಕ್ಕೆ ಹೆದರಿ ಕ್ರಿಮಿನಾಶಕ  ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ.
ಆರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಹಾಗೂ ಮೆಕ್ಕೆ ಜೋಳ ಬೆಳೆದಿದ್ದ. ಮೆಣಸಿನಕಾಯಿಗೆ ರೋಗ ಹೆಚ್ಚಾಗಿ ಫಲ ದೊರೆತಿಲ್ಲ. ಇದರಿಂದ  ಸಾಲಕ್ಕೆ ಹೆದರಿ  ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಕ್ರಮಿನಾಶಕ ಸೇವನೆ ನಂತರ  ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯ ರಾತ್ರಿ 2 ಗಂಟೆಗೆ ಮರಣ ಹೊಂದಿದ್ದಾನೆ. ಇಬ್ಬರು ಹೆಣ್ಣು ಮಕ್ಕಳು ಒಬ್ಬ ಪುತ್ರ ಇದ್ದಾನೆ.