ಬೈಲುವದ್ದಿಗೇರಿ ಸಹಕಾರ ಸಂಘ: ಪ್ರಸ್ತುತ ಸಾಲಿನಲ್ಲಿ 6 ಲಕ್ಷ ನಿವ್ವಳ ಲಾಭ

ಹೊಸಪೇಟೆ, ಡಿ.24: ತಾಲೂಕಿನ ಬೈಲುವದ್ದಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20ನೇ ಸಾಲಿನಲ್ಲಿ 6,57,863 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಎಂ.ರೇವಯ್ಯಸ್ವಾಮಿ ತಿಳಿಸಿದರು.
ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಮಹಾಜನ ಸಭೆಯಲ್ಲಿ 2019_20ನೇ ಲೆಕ್ಕಪತ್ರ ಮಂಡಿಸಿದ ಅವರು, ಸಹಕಾರ ಸಂಘವು ಒಟ್ಟು 28,60,34,579 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೂ.6,57,863 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘವು ಒಟ್ಟು 2550 ಸದಸ್ಯರನ್ನು ಹೊಂದಿದ್ದು, ಒಟ್ಟು ರೂ.1,25,18,250 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಬಿಡಿಸಿಸಿ ಬ್ಯಾಂಕಿನಿಂದ ಒಟ್ಟು 9,80,90,629 ಕೋಟಿ ರೂ.ಸಾಲವನ್ನು ಪಡೆದು, ಸಂಘದ ಸದಸ್ಯರಿಗೆ ರೂ.22,73,92,642 ಕೋಟಿ ಸಾಲ ನೀಡಲಾಗಿದೆ. ಒಟ್ಟು 84,27,711 ಲಕ್ಷ ನಿಧಿಗಳನ್ನು ಹೊಂದಿದೆ.ಠೇವಣಿ 16,58,55,528 ಕೋಟಿ ಹೊಂದಿದೆ. ಸಂಘವು ಕಳೆದ 8 ವರ್ಷಗಳಿಂದ ಸಾಲ ವಸೂಲಾತಿಯಲ್ಲಿ “ಎ” ಗ್ರೇಡ್ ನ್ನು ಹೊಂದಿದೆ. ರೈತರ ಸಾಲಮನ್ನಾ ಪಡೆದ ಅತಿ ಹೆಚ್ಚಿನ ಫಲಾನುಭವಿಗಳು ನಮ್ಮ ಸಹಕಾರ ಸಂಘದಲ್ಲಿರುವುದು ನಮಗೆ ಹೆಮ್ಮೆ ವಿಷಯವಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಆರ್.ಚಿದಾನಂದ, ಮುಖಂಡರಾದ ಸಂಗಪ್ಪ, ಪಂಚಪ್ಪ, ಉಳ್ಳಿ ಕೃಷ್ಣಪ್ಪ, ಗಂಗಾಧರಪ್ಪ, ಕೋರಿ ಪಕ್ಕೀರಪ್ಪ, ಗುಜ್ಜಲ ಶ್ರೀನಿವಾಸ, ವೈ.ಕೊಮಾರಪ್ಪ, ಸೊಂಡೂರು ವಿರುಪಾಕ್ಷಿ,ವಿ.ಬಸವರೆಡ್ಡಿ,ಹೊನ್ನೂರಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ್, ವಿ.ರಾಮಕೃಷ್ಣ, ಸಿ.ರಾಮಲ್ಲಿ, ಸಿದ್ದಯ್ಯಸ್ವಾಮಿ, ನಾಗರಾಜ, ಎರಿಸ್ವಾಮಿ, ಪರಶುರಾಮ, ಗಿರೀಶ, ಅನಿಲ್ ಇದ್ದರು.