ಬೈಲುವದ್ದಿಗೇರಿ ಅಂಬಣ್ಣ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.18: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ  ಬೈಲು ವದ್ದಿಗೇರಿ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಅಂಬಣ್ಣ(82) ನಿನ್ನೆ ನಿಧನ ರಾಗಿದ್ದಾರೆ.
ಪತ್ನಿ ಓರ್ವ ಪುತ್ರರನ್ನು ಅಗಲಿರುವ ಇವರು ಟಿ.ಬಿ. ಡ್ಯಾಂ, ನಾಗೇನಹಳ್ಳಿ, ಗಾದಿಗನೂರು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಜಿಲ್ಲಾ, ರಾಜ್ಯ ಮತ್ತು  ರಾಷ್ಟ್ರಪತಿ ಅಬ್ದುಲ್ ಖಲಾಂ ಅವರಿಂದ ರಾಷ್ಟ್ರೀಯ  ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಹಾಲಿ ಬೆಂಗಳೂರು ವಾಸಿಗಳಾಗಿದ್ದ ಅವರ ಅಂತ್ಯ ಸಂಸ್ಕಾರ ಅಲ್ಲಿಯೇ ಇಂದು ಜರುಗಿತು.
ಜಿಲ್ಲೆಯ ದಲಿತ ಮುಖಂಡ ಎ. ಮಾನಯ್ಯ ಸೇರಿದಂತೆ ಅನೇಕರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.