ಬೈರಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ಸಿರುಗುಪ್ಪ ಜೂ 06 : ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ರಾಮಯ್ಯ 100 ಸಸಿಗಳನ್ನು ನೆಟ್ಟು ನೀರು ಹಾಕಿದರು.
ನಂತರ ಮಾತನಾಡಿದ ಅವರು ಮನೆ ಮನೆಗೊಂದು ಮರಗಳನ್ನು ಬೆಳಸಿ ಊರಿಗೊಂದು ವನ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದರಿಂದ ಶುದ್ದವಾದ ಗಾಳಿಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ, ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಆಮ್ಲಜನಕದ ಕೊರತೆ ಎದುರಾಗದಂತೆ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಕಾಯಕವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಮಂಜುನಾಥ ಗೌಡ, ಪಂಚಾಯಿ ಅಭಿವೃದ್ದಿ ಅಧಿಕಾರಿ ಶೀಲಾ ಸೇರಿದಂತೆ ಗ್ರಾಮ ಪಂಚಾಯಿತಿ ಸದ್ಯರು ಹಾಗೂ ಸಿಬ್ಬಂದಿ ಇದ್ದರು.