ಬೈರಾಗಿಮಠ ಹನುಮಾನ ದೇವಸ್ಥಾನ: ಅಖಂಡ ಮಹಾರುದ್ರಾಭಿಷೇಕ್, ಗಣ, ಶಿವರುದ್ರ ಹೋಮ

oplus_0

ಹುಮನಾಬಾದ:ಏ.18: ಹನುಮಾನ ಜಯಂತಿ ಪ್ರಯುಕ್ತ ಬೈರಾಗಿ ಮಠ ದಕ್ಷಿಣ ಮುಖಿ ಹನುಮಾನ ದೇವಸ್ಥಾನದಲ್ಲಿ ಚನ್ನಮ್ಮಾ ಬಸಯ್ಯಾ ಸ್ವಾಮಿ ಹುಡಗಿ ಪರಿವಾರದಿಂದ ದ್ವೀತಿಯ ವರ್ಷ ಮೂರು ದಿವಸ ಸತತ ಅಖಂಡ ಮಹಾರುದ್ರಾಭಿಷೇಕ್, ಗಣ ಹೋಮ ಹಾಗೂ ಸಂಗೀತ ಶಿವರುದ್ರ ಹೂಮ ಕಾರ್ಯಕ್ರಮ ಹಮ್ಮಿಕೊಳ್ಳಲಾದೆ ಎಂದು ಕೆ.ಬಿ ಸ್ವಾಮಿ ಆಗೋ ಏಜೆನ್ಸಿ ಮಾಲಿಕ ಕರಬಸಯ್ಯಾ ಸ್ವಾಮಿ ಹುಡಗಿ ಮಾಹಿತಿ ನೀಡಿದ್ದಾರೆ.
ಪಟ್ಟಣದ ವೈರಾಗಿಮಠ ದಕ್ಷಿಣ ಮುಖಿ ಹನುಮಾನ ದೇವಸ್ಥಾನದ ಆವರಣದಲ್ಲಿ ಕರೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ದೇವಸ್ಥಾನ ಆಡಳಿತ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಹುಡಗಿ ಗ್ರಾಮದ ಹಿರೇಮಠ ಸಂಸ್ಥಾನದ ಶ್ರೀ. ವಿರುಪಾಕ್ಷ ಶಿವಾಚಾರ್ಯ ಹಾಗೂ ಹುಮನಾಬಾದ್ ಹಿರೇಮಠ ಸಂಸ್ಥಾನದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ, ಹೂಣಕಿರಣಗಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಗುಂಡ ಶಿವಾಚಾರ್ಯ ಅವರ ಸಾನಿಧ್ಯದಲ್ಲಿ ಏಪ್ರೀಲ್ 20 ರಂದು ಬೆಳಿಗ್ಗೆ 6ಕ್ಕೆ ಗಂಗಾಸ್ನಾನ, ಕಲಶ ಪೂಜಾ, ಸಂಕಲ್ಪ, ಸಂಗೀತ ರುದ್ರಾಭಿಷೇಕ, ನವಗ್ರಹ, ಪಂಚ ಕಲಶ, ಸೃಷ್ಟಿ ಪುನ್ಯವಾಚನ ಸೇರಿದಂತೆ ಪೂಜೆಗಳು ಜರುಗಲಿವೆ. ಎಂದು ಹೇಳಿದರು.
23 ರಂದು ಹನುಮಾನ ಜಯಂತಿಯಂದು ಬೆಳಿಗ್ಗೆ ತೋಟ್ಟಿಲು ಕಾರ್ಯಕ್ರಮ, ಗಣ ಹೂಮ, ಶಿವರುದ್ರ ಹೂಮ ಹಾಗೂ ಸೀತಾ ರಾಮ ಕಲ್ಯಾಣ ಉತ್ಸವ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಒಂದು ಪೂಜಾ ಕಾರ್ಯಕ್ರಮವನ್ನು ಕಲಬುರ್ಗಿ ಜಿಲ್ಲೆಯ ಹೋಣಕಿರಣಗಿ ಹಿರೇಮಠದ ಶ್ರೀ ರಾಚೋಟೇಶ್ವರ ವೈದಿಕಿಯ ಬಳಗದಿಂದ ಜರಗುಲಿದ್ದು, ಈ ಕಾರ್ಯಕ್ರಮವನ್ನು ಉಜೈನಿ, ಕಾಶಿ, ಬೆಂಗಳೂರು ಸೇರಿದಂತೆ ವಿವಿಧಡೆ ಪ್ರತಿಷ್ಠಿತ ಪಂಡಿತರು ಬಂದು ನೆರವೇರಿಸಿಕೊಡಲಿದ್ದಾರೆ. ಪೂಜೆಯಲ್ಲಿ ಯಾರ ಬೇಕಾದರು ಕುಳಿತು ಕೊಳ್ಳುವ ಮೂಲಕ ಹನುಮಂತನ ಕೃಪಾಶಿರ್ವಾದಕ್ಕೆ ಪಾತ್ರರಾಗ ಬೇಕು ಎಂದು ಮಾಹಿತಿ ನೀಡಿದರು.
ದೇವಸ್ಥಾನ ಅಧ್ಯಕ್ಷ ದೇವಾನಂದ ಘವಳಕರ ಮಾತನಾಡಿ, 16ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸ ಮಹಾರಾಜರು ಸ್ಥಾಪಿಸಿದ ಬೈರಾಗಿ ಮಠ ದಕ್ಷಿಣ ಮುಖಿ ಹಾಗೂ ಪಂಚಮುಖಿ ಹನುಮನಾ ದೇವಸ್ಥಾನ ಭಕ್ತರ ಬೇಡಿದ ವರ ನೀಡುವ ದೇವಸ್ಥಾನ ಇದಾಗಿದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರು ಕಡ್ಡಾಯ ಲುಂಗಿ ಹಾಗೂ ಟಾವೇಲ್ ತರತಕ್ಕದು. ಜತೆಗೆ ಈ ಒಂದು ದೇವಸ್ಥಾನ ಸಭಾ ಮಂಟಪ ಸೇರಿದಂತೆ ವಿವಿಧ ಜೀರ್ಣೋದ್ಧಾರ ಕಾರ್ಯಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಮ್ಮಿಕೊಂಡಿದ್ದು ಇದಕ್ಕೆ ಭಕ್ತರು ತಮ್ಮ ಕೈಯಿಂದ ಆದಷ್ಟು ಧನ ಸಹಾಯ ಮಾಡುವ ಮೂಲಕ ಹನುಮಂತನ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕು ಎಂದು ಭಕ್ತರಲ್ಲಿ ಮನವರಿಕೆ ಮಾಡಿಕೊಂಡರು.
ಬೈರಾಗಿ ಮಠ ದೇವಸ್ಥಾನ ಕಾರ್ಯದರ್ಶಿ ವೆಂಕಟೇಶ ಜಾಧವ, ಸದಸ್ಯ ಸಂದೀಪ ನಿಶಾನದಾರ, ನೀತಿನ ಘವಾಳಕರ, ದಿನೇಶಕುಮಾರ ಸೋಲಂಕಿ , ಪ್ರಧಾನ ಅರ್ಚಕ ಸಚಿನ ಕುಲಕರ್ಣಿ, ಇದ್ದರು.