ಬೈರದೇವನಹಳ್ಳಿ ಮೊರಾರ್ಜಿ ವಸತಿ ಶಾಲೆ ಕಾಮಗಾರಿ ಪರಿಶೀಲಿಸಿದ ಶಾಸಕ ನಾಗೇಂದ್ರ

ಬಳ್ಳಾರಿ ನ 17 : ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಿನ್ನೆ ತಾಲೂಕಿನ ಮೋಕ ಹೋಬಳಿಯ ಬೈರದೇವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ‘ಎಕೊಪಾರ್ಕ್’ ನ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿ ವಲಂಬವಾಗಿರುವುದರ ಬಗ್ಗೆ ಅಧಿಕಾರಿಗಳಿಗೆ ಅಸಮಾಧಾನ ವ್ಯಕ್ತಪಡಿಸಿ ತ್ವರಿತಗತಿಯಲ್ಲಿ ಕೈಗೊಳ್ಳಲು ಸುಚಿಸಿದರು.
ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲು ಸೂಚಿಸಿದ ಅವರು, ನೂತನ ವಸತಿ ಶಾಲೆಯ ಎಲ್ಲಾ ತರಗತಿಗಳಿಗೆ ಪೀಠೋಪಕರಣ, ಡೈನಿಂಗ್ ಟೇಬಲ್, ಪಾಠೋಪಕರಣ, ಸಂಗೀತೋಪಕರಣ, ರಂಗಮಂದಿರ ನಿರ್ಮಾಣ, ಗಣಿತ-ವಿಜ್ಞಾನೋಪಕರಣ, ಕ್ರೀಡಾ ಸಾಮಗ್ರಿ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಕಂಪ್ಯೂಟರ್, ಯು.ಪಿ.ಎಸ್, ಸಿಸಿ ಕ್ಯಾಮೆರಾ, ಹೈಮಾಸ್ಕ್ ಲೈಟ್ ಸೇರಿದಂತೆ ಅವಶ್ಯವಿರುವ ಇನ್ನಿತರ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೇಲಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿ ಕ್ರಮಕೈಗೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಗಾದಿಲಿಂಗನಗೌಡ, ಇ.ಒ ಬಸಪ್ಪ, ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜ್‍ಗೌಡ, ಜಿಪಂ ಸದಸ್ಯೆ ಹಂಪಮ್ಮ ಗೋವಿಂದ, ಅನಂತರಾಜ್, ಶಾಲಾ ಪ್ರಾಂಶುಪಾಲರಾದ ಅನಸೂಯ ಮೊದಲಾದವರು ಇದ್ದರು.