ಬೈತುಲ್ ಮಾಲ್‍ದಿಂದ ಉಚಿತ ಹೊಲಿಗೆ ತರಬೇತಿ

ಚಿಂಚೋಳಿ,ಸೆ.20- ಪಟ್ಟಣದ ಮೋಮಿನಪೂರ ಗಲ್ಲಿಯಲ್ಲಿ ಸಫಾ ಬೈತುಲ್ ಮಾಲ (ಎಸ್.ಬಿ.ಎಮ್) ವತಿಯಿಂದ ಬಡ ಮಹಿಳೆಯರಿಗಾಗಿ ಆಯೋಜಿಸಿರುವ 4 ತಿಂಗಳಗಳ ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಚಿಂಚೋಳಿ ಎಸ.ಬಿ.ಎಮ್ ಮುಖ್ಯಸ್ಥ ಇಸ್ಮಾಯಿಲ್ ಪಟೇಲ ಅವರು ಹೇಳಿದರು.
ಪಟ್ಟಣದ ಹೊಲಿಗೆ ಕೇಂದ್ರವನ್ನು ಮೋಮಿನಪೂರ ಗಲ್ಲಿಯಲ್ಲಿ ಪ್ರಾರಂಭ ಮಾಡಿದ್ದು, ಚಿಂಚೋಳಿ ಪಟ್ಟಣದ ಬಡ ಮಹಿಳೆಯರಿಗೆ ಇಲ್ಲಿ ಉಚಿತ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಅನ್ವರ್ ಖತೀಬ್, ಹಸನ ಹಶ್ಮಿ, ಮುಫ್ತಿ ಖಮ್ರಿದ್ದಿನ್, ಮೇರಾಜ್ ಸಾಬ್ ಕೊಹಿರಿ, ಮಂಜೂರು ಅಹ್ಮದ್,ಮುಫ್ತಿ ಅಬ್ದುಲ್ ಆಹಾದ ಖಸ್ಮಿ, ಅಮ್ಮು ಪಟೇಲ್, ಎಂಡಿ ಬಬ್ಲು, ಅಸ್ಲಾಂ ಸೌದಾಗರ್, ಇದ್ದರು