ಬೈಡೆನ್ ಪ್ರಮಾಣವಚನಕ್ಕೆ ಟ್ರಂಪ್ ಗೈರು

ವಾಷಿಂಗ್ಟನ್, ಜ.೯- ಅಮೆರಿಕಾದಲ್ಲಿ ರಾಜಕೀಯ ಗುದ್ದಾಟ ಮುಂದುವರೆದಿದ್ದು, ಇದೇ ತಿಂಗಳು ೨೦ ರಂದು ನಡೆಯಲಿರುವ ಅಮೆರಿಕದ ೪೬ನೇ ಅಧ್ಯಕ್ಷ ಜೋ ಬಿಡೆನ್ ಅವರ ಪ್ರಮಾಣವಚನ ಸಮಾರಂಭಕ್ಕೆ ತಾವು ಹೋಗುವುದಿಲ್ಲ ಎಂದು, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಬಿಡೆನ್ ಪ್ರಮಾಣವಚನ ಸಮಾರಂಭದಲ್ಲಿ ತಾವು ಗೈರು ಹಾಜರಾಗಲಿರುವುದಾಗಿ ಸ್ಪಷ್ಟಪಡಿಸಿದ್ದರು.
ಜೋ ಬಿಡೆನ್ ವಿರುದ್ಧ ಚುನಾವಣಾ ಅಕ್ರಮದ ಕಿಡಿಕಾರುತ್ತಲೇ ಇರುವ ಡೊನಾಲ್ಡ್ ಟ್ರಂಪ್, ಇದೀಗ ಅವರ ಪ್ರಮಾಣವಚನ ಸಮಾರಂಭಕ್ಕೆ ಹೋಗದಿರುವ ನಿರ್ಣಯ ಕೈಗೊಂಡು ಸುದ್ದಿಯಾಗಿದ್ದಾರೆ.ಟ್ರಂಪ್ ಅವರ ಈ ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದೆ.
ಅಲ್ಲದೆ, ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಹಾಗೂ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷರು ಇರುವುದು ವಾಡಿಕೆ.