ಬೈಡೆನ್ ಚಿಕ್ಕ ಮಗು ಜತೆ ಚೆನ್ನಾಟ

ವಾಷಿಂಗ್ಟನ್,ಜು.೧೫- ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೆಲ್ಸಿಂಕಿಯಿಂದ ನಿರ್ಗಮಿಸುವ ಸಮಯದಲ್ಲಿ ಚಿಕ್ಕ ಮಗುವಿನ ಜೊತೆ ಚಿನ್ನಾಟ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ತಾಯಿ ಮಗುವನ್ನು ಎತ್ತಿಕೊಂಡಿದ್ದ ವೇಳೆ ಜೋ ಬೈಡೆನ್ ಅವರು ಭುಜಕ್ಕೆ ಮುತ್ತು ಕೊಡಲು ಹೋದಾಗ ಮಗು ಗಾಬರಿಗೊಂಡ ಘಟನೆಯೂ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ
ಹೆಲ್ಸಿಂಕಿ-ವಂಟಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಫೋರ್ಸ್ ಒನ್ ಅನ್ನು ಹತ್ತುವ ಮೊದಲು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಸ್ವಾಗತಿಸಿದಾಗ ಚಿಕ್ಕ ಮಗು ಗಾಬರಿಗೊಂಡ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ವೀಡಿಯೋದಲ್ಲಿ, ಜೋ ಬೈಡೆನ್ ಚಿಕ್ಕ ಹುಡುಗಿಯ ಮೇಲೆ ಒರಗುತ್ತಿರುವುದನ್ನು ಕಾಣಬಹುದು ಮತು ಲಘುವಾಗಿ ಮೆಲ್ಲಗೆ ಮಗುವಿನ ಬಳಿ ಹೋದಾಗ ಮುಗು ಭಯಭೀತಳಾಗಿ ಕಾಣುತ್ತಾಳೆ
ಕಾಲೆಳೆದ ನೆಟ್ಟಿಗರು”
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯ ಕುರಿತು ಟ್ವೀಟ್‌ನೊಂದಿಗೆ ಕಾಮೆಂಟ್ ಮಾಡಿದ್ದಾರೆ, ಅಮೇರಿಕಾ ಅಧ್ಯಕ್ಷ ಪದವಿ ಮುಗಿಯುತ್ತಾ ಬಂದರೂ ಐಡೆನ್ ಅವರ ಮಗುವಿನೊಂದಿಗೆ ಇನ್ನೂ ತೆವಳುವ ಕ್ಷಣವಾಗಿದೆ. ಬೈಡೆನ್ ಮಾಡಬೇಕಾಗಿರುವುದು ಸಾಕಷ್ಟಿದೆ.ಆದರೆ ಅದು ಅವರಿಗೆ ಇನ್ನೂ ಗೊತ್ತಾಗಿಲ್ಲ ಎಂದು ಕಾಲೆಳೆದಿದ್ದಾರೆ.
ಹಾಸ್ಯನಟ ಟಿಮ್ ಯಂಗ್ ಅವರು ಟ್ವೀಟ್ ಮಾಡಿ “ಯಾರಾದರೂ ಇನ್ನೊಬ್ಬ ವ್ಯಕ್ತಿಯ ಮಗುವಿನ ಮೇಲೆ ಏಕೆ ಬಾಯಿ ಹಾಕುತ್ತಾರೆ. ಇದು ಅಸಹ್ಯಕರ ನಡವಳಿಕೆ ಎಂದಿದ್ದಾರೆ