ಬೈಡೆನ್‌ಗೆ ದಕ್ಷಿಣ ಕೊರಿಯಾ ಆಘಾತ

ವಾಷಿಂಗ್ಟನ್, ಮಾ.೨೪- ಸತತ ಕ್ಷಿಪಣಿ ಪ್ರಯೋಗದ ಮೂಲಕ ಈಗಾಗಲೇ ನೆರೆಯ ದಕ್ಷಿಣ ಕೊರಿಯಾ ಸೇರಿದಂತೆ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿರುವ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಇದೀಗ ಅಮೆರಿಕಾದಲ್ಲಿ ಜೋ ಬೈಡೆನ್ ಆಡಳಿತಕ್ಕೆ ಇದೇ ಮೊದಲ ಬಾರಿಗೆ ಆಘಾತ ನೀಡಲಾಗಿದೆ.
ಇತ್ತೀಚೆಗೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತಕ್ಕೆ ಭೇಟಿ ನೀಡಿ, ತೆರಳಿದ್ದರು. ಆದರೆ ಭಾರತಕ್ಕೆ ಆಗಮಿಸುವ ಮುನ್ನ ಆಸ್ಟಿನ್, ದಕ್ಷಿಣ ಕೊರಿಯಾ ಹಾಗೂ ಜಪಾನ್‌ಗೆ ಭೇಟಿ ನೀಡಿದ್ದರು. ಮುಖ್ಯವಾಗಿ ಉತ್ತರ ಕೊರಿಯಾವನ್ನು ಗುರಿಯಾಗಿರಿಸಿ ಆಸ್ಟಿನ್, ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದರು. ಆದರೆ ದಕ್ಷಿಣ ಕೊರಿಯಾಗೆ ಆಸ್ಟಿನ್ ಭೇಟಿ ನೀಡಿ ತೆರಳಿದ ಕೆಲವೇ ದಿನದಲ್ಲಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾವು ಹಲವು ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಅಮೆರಿಕಾಗೆ ಸೆಡ್ಡು ಹೊಡೆಯಲಾಗಿದೆ. ಆದಿತ್ಯವಾರದಂದು ಉತ್ತರ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಲಾಗಿದೆ. ಆದರೆ ಇದು ಕಡಿಮೆ ತೀವ್ರತೆಯನ್ನು ಹೊಂದಿದ್ದು, ಕೇವಲ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾವನ್ನು ಪ್ರಚೋದಿಸುವ ತಂತ್ರವಾಗಿತ್ತು ಎಂದು ಹೇಳಲಾಗಿದೆ. ಉತ್ತರ ಕೊರಿಯಾದ ಪಶ್ಚಮ ಕರಾವಳಿಯಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ಇನ್ನು ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ಪ್ರಕ್ರಿಯೆಯು ಅಮೆರಿಕಾಗೆ ಪ್ರಚೋದನೆ ನೀಡುವ ಗುರಿಯೇ ಎಂಬ ಮಾಧ್ಯಮಗಳ ಪ್ರಶ್ನೆಯನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನಿರಾಕರಿಸಿದ್ದು, ಇದೊಂದು ಅಲ್ಲಿನ ಎಂದಿನ ಕಾರ್ಯವಾಗಿದೆ ಎಂದು ತಿಳಿಸಿದ್ದಾರೆ.