ಬೈಡೆನ್,ಅಲ್ಬನೀಸ್ ಭೇಟಿಗೆ ಸುನಕ್ ನಿರ್ಧಾರ

ನವದೆಹಲಿ/ ವಾಷಿಂಗ್ಟಂನ್,ಮಾ.೧೨- ಚೀನಾವನ್ನು ಎದುರಿಸಲು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಲು ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಲು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮುಂದಾಗಿದ್ದಾರೆ. ೨೦೨೧ ರಲ್ಲಿ ಘೋಷಿಸಿದಂತೆ ಆಸ್ಟ್ರೇಲಿಯಾ ಇಂಗ್ಲೆಂಡ್ ಅಮೇರಿಕಾ – ಎಯುಕೆಯುಎಸ್ ಆಶ್ರಯದಲ್ಲಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಉಪಸ್ಥಿತಿ ಎದುರಿಸಲು ಈ ಮೂರು ರಾಷ್ಟ್ರಗಳು ಒಗ್ಗೂಡಿವೆ.
ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಲು ಅಮೇರಿಕಾಕ್ಕೆ ಭೇಟಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಂಗ್ಲೆಂಡ್ ಜಾಗತಿಕ ಮೈತ್ರಿ ಮಾಡಿಕೊಳ್ಳುವ ಮೂಲಕ ಶಕ್ತಿ ಮತ್ತು ಭದ್ರತೆಯ ಅತ್ಯುತ್ತಮ ಮೂಲವಾಗಿದೆ” ಎಂದು ಇಂಗ್ಲೆಂಡ್ ಪ್ರಧಾನಿ ಸುನಕ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂದಿನ ಹಂತವಾದ ಎಯುಕೆಯುಎಸ್ ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮ ಪ್ರಾರಂಭಿಸಲು ಅಮೇರಿಕಾಕ್ಕೆ ಭೇಟಿ ನೀಡುತ್ತಿರುವುದಾಗಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಖಚಿತ ಪಡಿಸಿದ್ದಾರೆ
ನಮ್ಮ ಹತ್ತಿರದ ಮಿತ್ರರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಯ ಜೊತೆಗೆ ಇಂಡೋ ಫೆಸಿಫಿಕ್ ವಲಯದಲ್ಲಿ ಭದ್ರತೆ, ಹೊಸ ತಂತ್ರಜ್ಞಾನ ಮತ್ತು ಆರ್ಥಿಕ ಪ್ರಯೋಜನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಸಮಗ್ರ ಪರಾಮರ್ಶೆ ಎಂದು ಕರೆಯಲ್ಪಡುವ ಭದ್ರತೆ, ರಕ್ಷಣೆ ಮತ್ತು ವಿದೇಶಾಂಗ ನೀತಿಯ ನವೀಕರಣವನ್ನು ಇಂಗ್ಲೆಂಡ್ ಪ್ರಕಟಿಸಲು ಮುಂದಾಗಿದೆಹೆಚ್ಚುತ್ತಿರುವ ಬೆದರಿಕೆಗಳ ಜಗತ್ತಿಗೆ ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಇದು ಈ ಮೂರು ರಾಷ್ಟ್ರಗಳ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.