ಬೈಕ ಕಳ್ಳತನ ಆರೋಪಿ ಬಂಧನ

ಸುರಪುರ: ನ.28:ನಗರ ಪೆÇಲೀಸರು ಬೈಕ ಕಳ್ಳತನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ನವಂಬರ್ 24 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನಿಲ್ಲಿಸಿದ ಮೋಟಾರು ಸೈಕಲ ಕಳ್ಳತನವಾದ ಬಗ್ಗೆ ಉತ್ತಪ್ಪ ಎನ್ನುವವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಿವೈಎಸ್ಪಿ ಡಾ. ದೇವರಾಜ ಬಿ ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ ಕುಮಾರ ಮೂಲಿಮನಿ ನೇತೃತ್ವದಲ್ಲಿ ಪಿಎಸಐ ಕೃಷ್ಣ ಸುಬೇದಾರ್ ಮತ್ತು ಮನೋಹರ, ಬಸವರಾಜ, ಹುಸೇನ, ಸಿದ್ದರಾಮರೆಡ್ದಿ ಅವರ ತಂಡ ಬೈಕ ಕಳ್ಳನಿಗಾಗಿ ಶೋಧ ಕಾರ್ಯಚರಣೆ ನಡೆಸಿದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ್ ಜಿಲ್ಲೆಯ ಮೂಲದ ಗಣಪತಿ ಮಾನೆ(43) ಎನ್ನುವ ವ್ಯಕ್ತಿಯನ್ನು ಬಂಧಿಸಿ, ಎರಡು ಮೋಟಾರು ಸೈಕಲಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣ ಭೇದಿಸಿದ ತಂಡಕ್ಕೆ ಪ್ರಶಂಶಿಸಿ ಬಹುಮಾನ ಘೋಷಿಸಲಾಗಿದೆ.